alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಯ ಬಂಧನದೊಂದಿಗೆ ಬಯಲಾಯ್ತು ಭೀಕರ ಸತ್ಯ

arrest rape

ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬೆದರಿಸಿ ಕಳೆದ ಮೂರು ವರ್ಷಗಳಿಂದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಇದರ ವಿಡಿಯೋವನ್ನು ಸಾಮಾಜಿಕ ಜಾಲ ತಾಣಕ್ಕೆ ಹಾಕುವುದಾಗಿ ಹೆದರಿಸಿ ಹಣವನ್ನೂ ಪಡೆದಿರುವ ಪ್ರಕರಣವೊಂದು ಹೈದರಾಬಾದಿನಲ್ಲಿ ನಡೆದಿದೆ.

ಜೀಶನ್ ಆಹ್ಮದ್ ಎಂಬಾತ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದನೆನ್ನಲಾಗಿದೆ. ಈ ವಿಚಾರ ಅರಿತಿದ್ದ ಹಿರಿಯ ವಿದ್ಯಾರ್ಥಿಯಾಗಿದ್ದ ಸೈಯ್ಯದ್ ಆದಿಲ್ ಎಂಬವನೂ ಈ ವಿಷಯ ಬಹಿರಂಗಪಡಿಸುವುದಾಗಿ ಬೆದರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಇದರ ಪರಿಣಾಮ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದು, ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಆಕೆಗೆ ಗರ್ಭಪಾತ ಮಾಡಿಸಲಾಗಿದೆ. ಇದಾದ ಬಳಿಕವೂ ಆಕೆಯನ್ನು ಇಬ್ಬರು ಕಾಮುಕರೂ ಹಲವಾರು ಬಾರಿ ಬಳಸಿಕೊಂಡಿದ್ದು, ಜೊತೆಗೆ ವಿಚಾರ ಬಹಿರಂಗಪಡಿಸುವುದಾಗಿ ಬೆದರಿಸುತ್ತಾ 30 ಸಾವಿರಕ್ಕೂ ಅಧಿಕ ಹಣವನ್ನು ಪಡೆದುಕೊಂಡಿದ್ದರೆಂದು ಹೇಳಲಾಗಿದೆ. ಇದೀಗ ವಿದ್ಯಾರ್ಥಿನಿ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...