alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನ ಸಂಗಕ್ಕಾಗಿ ಹೆತ್ತ ಮಗಳಿಗೆ ಇಂಥಾ ಶಿಕ್ಷೆ

ಹೈದ್ರಾಬಾದ್ ನಲ್ಲಿ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು 4 ವರ್ಷದ ಪುಟ್ಟ ಮಗಳನ್ನು ಬಲವಂತವಾಗಿ ಬಿಸಿ ಕಾವಲಿ ಮೇಲೆ ಕೂರಿಸಿದ್ದಾಳೆ. ನಂತರ ಅನಾಥಾಲಯಕ್ಕೆ ತೆರಳಿ ಸುಳ್ಳು ಕಥೆ ಕಟ್ಟಿದ್ದಾರೆ.

ಮಗುವನ್ನು ನಾಂಪಲ್ಲಿಯ ಭರೋಸಾ ಕೇಂದ್ರಕ್ಕೆ ಕರೆದೊಯ್ದಿದ್ದರು. ಈ ಬಾಲಕಿ ರೈಲು ನಿಲ್ದಾಣದ ಬಳಿ ಸಿಕ್ಕಿದ್ದಾಳೆ, ಅವಳನ್ನು ನಾವು ದತ್ತು ತೆಗೆದುಕೊಳ್ಳಲು ಬಯಸುತ್ತೇವೆ. ಆದ್ರೆ ಅವಳಿಗೆ ಸುಟ್ಟ ಗಾಯಗಳಾಗಿವೆ, ಜೊತೆಗೆ ವಿಕಲ ಚೇತನೆ ಅಂತೆಲ್ಲಾ ಅಧಿಕಾರಿಗಳ ಬಳಿ ಹೇಳಿದ್ದಾರೆ. ಮಗು ರೈಲು ನಿಲ್ದಾಣದಲ್ಲಿ ಸಿಕ್ಕಿಲ್ಲ ಅನ್ನೋ ಅನುಮಾನ ಅಧಿಕಾರಿಗಳಿಗಿತ್ತು.

ಸರಿಯಾಗಿ ವಿಚಾರಿಸಿದಾಗ ಮಗು ತನ್ನದೇ ಅಂತಾ ಮಹಿಳೆ ಒಪ್ಪಿಸಿಕೊಂಡಿದ್ದಾಳೆ. ಹೇಗಾದ್ರೂ ಅವಳನ್ನು ದೂರ ಮಾಡಬೇಕೆಂದು ಈ ರೀತಿ ಪ್ಲಾನ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಮಹಿಳೆ ಮತ್ತವಳ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾಳೆ.

ಲಲಿತಾ ಎಂಬ ಈ ಮಹಿಳೆ ಗಂಡನನ್ನು ಬಿಟ್ಟು ಬಂದಿದ್ಲು. 2 ತಿಂಗಳುಗಳಿಂದ ಪ್ರಿಯಕರ ಪ್ರಕಾಶ್ ಜೊತೆ ನೆಲೆಸಿದ್ಲು. ಮಗುವನ್ನು ಜೊತೆಗಿಟ್ಟುಕೊಳ್ಳುವುದು ಪ್ರಕಾಶ್ ಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಕೊನೆಗೆ ಲಲಿತಾ ಕೋಪದಲ್ಲಿ ಮಗುವನ್ನು ಬಿಸಿ ಕಾವಲಿ ಮೇಲೆ ಕೂರಿಸಿದ್ದಾಳೆ.

ಮಗು ಲ್ಯಾಪ್ಟಾಪ್ ಬೀಳಿಸಿದ್ರಿಂದ ಕೋಪದಲ್ಲಿ ಹೊಡೆದೆ. ಆಗ ಆಯತಪ್ಪಿ ಬಿಸಿ ಕಾವಲಿ ಮೇಲೆ ಬಿದ್ದುಬಿಟ್ಟಿದ್ದಾಳೆ. ಹಾಗಾಗಿ ಮೈಕೈಯೆಲ್ಲಾ ಸುಟ್ಟು ಹೋಗಿದೆ ಅಂತಾ ಸುಳ್ಳು ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...