alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಸಾವಿಗೆ ಕಾರಣವಾಯ್ತು ಪಾರ್ಟಿಯಲ್ಲಿ ಪತ್ನಿ ಮಾಡಿದ ಡಾನ್ಸ್

ಭೋಪಾಲ್ ಮಹಿಳೆಯೊಬ್ಬಳು ಮಾಡಿದ ಡಾನ್ಸ್ ದುಬಾರಿಯಾಗಿ ಪರಿಣಮಿಸಿದೆ. ಆಕೆ ಗಂಡನ ಸಾವಿಗೆ ಕಾರಣವಾಗಿದೆ. ಹೆಂಡತಿ ಡಾನ್ಸ್ ನೋಡಿ ಕೋಪಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನಿಗೆ ಮದುವೆಯಾಗಿ ನಾಲ್ಕು ತಿಂಗಳು ಕಳೆದಿತ್ತು ಎನ್ನಲಾಗಿದೆ.

ಮೂಲತಃ ಆಗ್ರಾ ನಿವಾಸಿಯಾಗಿರುವ 27 ವರ್ಷದ ಸೋನು 15 ದಿನಗಳ ಹಿಂದೆ ಕೆಲಸಕ್ಕಾಗಿ ಭೋಪಾಲ್ ಗೆ ಬಂದಿದ್ದ. ಭೋಪಾಲ್ ನಲ್ಲಿ ಆತನ ಪತ್ನಿಯ ಅಣ್ಣ ವಾಸವಾಗಿದ್ದ. ಭೋಪಾಲ್ ಗೆ ಬಂದ ಸೋನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ ಸೋನು ಭಾವನ ಮಗಳ ಬರ್ತಡೇ ಯಾಗಿತ್ತು.

ಹುಟ್ಟುಹಬ್ಬದ ಪಾರ್ಟಿಯಲ್ಲಿ ಸೋನು ಪತ್ನಿ ಭರ್ಜರಿ ಡಾನ್ಸ್ ಮಾಡಿದ್ದಳು. ಇದ್ರಿಂದ ಬೇಸರಗೊಂಡ ಸೋನು ಶುಕ್ರವಾರ ಗಲಾಟೆ ಮಾಡಿದ್ದಾನೆ. ಪತಿ-ಪತ್ನಿ ನಡುವೆ ಜಗಳವಾಗಿದೆ. ಕೋಪಗೊಂಡ ಪತ್ನಿ ಸಹೋದರನ ರೂಮಿಗೆ ಹೋಗಿದ್ದಾಳೆ. ಇದ್ರಿಂದ ಮತ್ತಷ್ಟು ಕೋಪಗೊಂಡ ಸೋನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...