alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಅಕ್ರಮ ಸಂಬಂಧ ತಡೆಯಲು ಹೋದ ಪತಿಗೆ ಏನಾಯ್ತು..?

wife

ಪತಿ-ಪತ್ನಿ ಸಂಬಂಧಕ್ಕೆ ಕಳಂಕ ತರುವಂತಹ ಒಂದು ಘಟನೆ ಹರಿಯಾಣದ ಝಾಜ್ಜರ್ ನಲ್ಲಿ ವರದಿಯಾಗಿದೆ. ಅಕ್ರಮ ಸಂಬಂಧಕ್ಕೆ ಪತಿ ಒಪ್ಪಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ಎಲ್ಲರೂ ಬೆಚ್ಚಿ ಬೀಳುವಂತಹ ಕೆಲಸಕ್ಕೆ ಕೈ ಹಾಕಿದ್ದಾಳೆ. ಸ್ಥಳಕ್ಕೆ ಹೋದ ಪೊಲೀಸರೇ ದಂಗಾಗಿದ್ದಾರೆ.

ಪೂಜಾ ಮದುವೆ ಬಲ್ಜಿತ್ ಜೊತೆಗಾಗಿತ್ತು. ಮದುವೆ ನಂತರವೂ ಪೂಜಾ ಪರ ಪುರುಷರ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗ್ತಾ ಇತ್ತು. ಗಂಡ ಇನ್ನೊಬ್ಬನ ಜೊತೆ ಹೋಗಲು ಬಿಡಲಿಲ್ಲ ಎಂಬ ಕಾರಣಕ್ಕೆ, ಸಪ್ತಪದಿ ತುಳಿದು, ಏಳು ಜನ್ಮಗಳವರೆಗೆ ಜೊತೆಯಾಗಿರುತ್ತೇನೆಂದು ಕೊಟ್ಟಿದ್ದ ಮಾತನ್ನು ಪೂಜಾ ಮುರಿದಿದ್ದಾಳೆ. ಗಂಡನನ್ನು ತುಂಡು ತುಂಡಾಗಿ ಕತ್ತರಿಸಿದ್ದಾಳೆ.

ತಲೆಯನ್ನು ಬ್ಯಾಗ್ ನಲ್ಲಿ ಹಾಕಿ, ಮನೆಯಲ್ಲಿಯೇ ಗುಂಡಿ ತೋಡಿ ಹೂತು ಹಾಕಿದ್ದಾಳೆ. ಉಳಿದ ಭಾಗಗಳನ್ನು ಬೆಡ್ ಕೆಳಗೆ ಅಡಗಿಸಿಟ್ಟಿದ್ದಾಳೆ. ಎರಡು ದಿನಗಳಿಂದ ಬಲ್ಜಿತ್ ಕಾಣಿಸಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಆತನ ಮನೆಯವರು, ಪೂಜಾ ಮನೆಗೆ ಬಂದಿದ್ದಾರೆ. ಆದ್ರೆ ಮನೆ ಬಾಗಿಲು ತೆರೆಯಲು ಪೂಜಾ ಒಪ್ಪಲಿಲ್ಲ. ನಂತ್ರ ಪೊಲೀಸರು ಮನೆ ಬಾಗಿಲು ತೆರೆದಾಗ ಸತ್ಯ ಗೊತ್ತಾಗಿದೆ.

ಹೆಂಡತಿ ಪರ ಪುರುಷರ ಜೊತೆ ಸಂಬಂಧ ಬೆಳೆಸುತ್ತಿದ್ದಾಳೆ ಎನ್ನುವ ವಿಚಾರವನ್ನು ಬಲ್ಜಿತ್ ತನ್ನ ಸಹೋದರನ ಜೊತೆ ಹೇಳಿಕೊಂಡಿದ್ದ. ಇದಕ್ಕೆ ವಿರೋಧ ಮಾಡಿದ ನನಗೆ ನಶೆ ಬರುವ ಮದ್ದು ನೀಡಿ,ಕೈ ಕಾಲು ಕಟ್ಟಿ ಹಾಕಿದ್ದಳು ಎಂಬುದನ್ನೂ ತಿಳಿಸಿದ್ದ. ಪೂಜಾ ಹಿನ್ನೆಲೆ ಗೊತ್ತಿದ್ದ ಮನೆಯವರು ಆಕೆ ವಿರುದ್ಧ ದೂರು ನೀಡಿದ್ದು, ಪಾಪಿ ಪತ್ನಿ ಈಗ ಜೈಲು ಸೇರಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...