alex Certify ಪತ್ನಿ ಕೊಲೆಗೈದು ನೀರಿನ ಡ್ರಮ್‌ನಲ್ಲಿ ಶವ ಬಚ್ಚಿಟ್ಟ ಪತಿ ಸಿಕ್ಕಿಬಿದ್ದಿದ್ದು ಹೀಗೆ…. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಕೊಲೆಗೈದು ನೀರಿನ ಡ್ರಮ್‌ನಲ್ಲಿ ಶವ ಬಚ್ಚಿಟ್ಟ ಪತಿ ಸಿಕ್ಕಿಬಿದ್ದಿದ್ದು ಹೀಗೆ….

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹಳಿಯಾಳದಲ್ಲಿ ಪತ್ನಿಯನ್ನೇ ಕೊಲೆಗೈದ ಪತಿ ಮೃತದೇಹವನ್ನು ನೀರಿನ ಬ್ಯಾರೆಲ್ ನಲ್ಲಿ ಬಚ್ಚಿಟ್ಟಿದ್ದಾನೆ. ಹಳಿಯಾಳ ಹಾಗೂ ರಾಮನಗರ ಠಾಣೆ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ತೆರಗಾಂವ ಗ್ರಾಮದ ತುಕಾರಾಮ ಮಡಿವಾಳ(38) ಬಂಧಿತ ಆರೋಪಿಯಾಗಿದ್ದಾನೆ. ಪತ್ನಿ ಶಾಂತಕುಮಾರಿ(34)ಯೊಂದಿಗೆ ವಾಸವಾಗಿದ್ದ ತುಕಾರಾಮ ಬೇರೆ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ 22ರಂದು ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ತುಕಾರಾಮ ನೀರಿನ ಡ್ರಮ್ ನಲ್ಲಿ ಬಚ್ಚಿಟ್ಟಿದ್ದಾನೆ.

ನಂತರ ಖಾನಾಪುರದ ರಿಜ್ವಾನ್ ಅವರ ಟಾಟಾ ಏಸ್ ವಾಹನ ಬಾಡಿಗೆ ಪಡೆದು ರಿಜ್ವಾನ್ ಮತ್ತು ಸಮೀರ್ ಜೊತೆಗೆ ಸೇರಿ ರಾಮನಗರದ ಕಾಡಿನಲ್ಲಿ ಮೃತದೇಹ ಎಸೆಯಲು ಹೋಗಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...