alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ಮುಟ್ಟಿದ್ರೆ ವಿಷ ಕುಡಿಯುತ್ತೇನೆಂದ್ಲು ವಧು..!

bride

ಮದುವೆ ದಿನ ರಾತ್ರಿ ವರ ಧಮಕಿ ಹಾಕಿದ, ಪತ್ನಿ ಮೇಲೆ ಹಲ್ಲೆ ನಡೆಸಿದ ಎನ್ನುವ ಸುದ್ದಿಗಳನ್ನು ನೀವು ಕೇಳಿರ್ತಿರಾ. ಆದ್ರೆ ಮೊದಲ ರಾತ್ರಿ ವಧು, ವರನಿಗೆ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಗುರ್ ಗಾಂವ್ ನಲ್ಲಿ ನಡೆದಿದೆ.

ಹೆಂಡತಿ ಹಾಗೂ ಹೆಂಡತಿ ಮನೆ ಕಡೆಯವರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ನೊಂದ ಪತಿಯೊಬ್ಬ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಗಾಜಿಯಾಬಾದ್ ಯುವಕನ ಮದುವೆ ಸಂಭ್ರಮದಿಂದ ನೆರವೇರಿತ್ತು. ಮೊದಲ ರಾತ್ರಿಯ ಖುಷಿಯಲ್ಲಿದ್ದ ವರನಿಗೆ ಶಾಕ್ ಕಾದಿತ್ತು.

ಮೊದಲ ರಾತ್ರಿ ನನ್ನ ಮುಟ್ಟಬೇಡ. ಮುಟ್ಟಿದರೆ ವಿಷ ಕುಡಿಯುತ್ತೇನೆಂದು ವಧು ಬೆದರಿಸಿದ್ದಾಳೆ. ಕೆಲ ದಿನಗಳ ಕಾಲ ಮನೆಯಲ್ಲಿದ್ದ ಪತ್ನಿ, ಗಂಟು ಮೂಟೆ ಕಟ್ಟಿಕೊಂಡು ತವರು ಮನೆ ಸೇರಿದ್ದಾಳೆ. ಆಕೆಗೆ ಬೇರೊಬ್ಬ ಯುವಕ ಆಗಾಗ ಕರೆ ಮಾಡುತ್ತಿದ್ದ ಎನ್ನಲಾಗಿದೆ.

ನೊಂದ ಪತಿಗೆ ಪತ್ನಿ ಮನೆ ಕಡೆಯಿಂದ ಬೆದರಿಕೆ ಕರೆ ಬರುತ್ತಿದೆಯಂತೆ. ಹಾಗಾಗಿ ಪೊಲೀಸ್ ಮೊರೆ ಹೋಗಿರುವ ಪತಿ, ರಕ್ಷಣೆ ನೀಡುವಂತೆ ಎಸ್ಪಿಗೆ ದೂರು ಸಲ್ಲಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...