alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವನ್ನಪ್ಪಿದ ಪತ್ನಿ ಕಂಡು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳದಲ್ಲಿ ಕೋಪಗೊಂದ ಪತಿ ಮಹಾಶಯ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಪತ್ನಿ ಸಾವನ್ನಪ್ಪುತ್ತಿದ್ದಂತೆಯೇ ಶಾಕ್ ಆದ ವ್ಯಕ್ತಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇಲ್ಲಿನ ಕೊಮ್ಮಸಂದ್ರ ಗ್ರಾಮದ ಶ್ಯಾಮಲಾ (22) ಮತ್ತು ದೇವರಾಜ್ (28) ಸಾವನ್ನಪ್ಪಿದ ದಂಪತಿ. ದಂಪತಿಗಳ ಮಧ್ಯೆ ತಡರಾತ್ರಿ ಜಗಳ ಆರಂಭವಾಗಿದೆ. ಕೋಪಗೊಂಡ ದೇವರಾಜ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ತೀವ್ರವಾಗಿ ಹಲ್ಲೆಗೊಳಗಾದ ಪತ್ನಿ ಶ್ಯಾಮಲಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪತ್ನಿ ಸಾವನ್ನು ಕಂಡು ಗಾಬರಿಯಾದ ದೇವರಾಜ್, ತನ್ನಿಂದಾಗಿ ಪತ್ನಿ ಸತ್ತು ಹೋದಳಲ್ಲಾ ಎಂದು ಮನನೊಂದು ನೇಣು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...