alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಮನೆಯಲ್ಲಿರುವಾಗ್ಲೇ ಪತ್ನಿ ಕೋಣೆಗೆ ನುಗ್ಗಿದ್ರು ಇಬ್ಬರು ಸ್ನೇಹಿತರು…!

ಪತಿಯೊಬ್ಬ ತನ್ನ ಸ್ನೇಹಿತರ ಜೊತೆ ಮಲಗುವಂತೆ ಪತ್ನಿಗೆ ಒತ್ತಡ ಹೇರಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಕೋಪಗೊಂಡ ಪತಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ.

ಉತ್ತರಾಖಂಡದ ಉಧಮ್ ಸಿಂಗ್ ನಗರದ ಪೀಡಿತೆ ಮದುವೆ ಒಂದು ವರ್ಷದ ಹಿಂದೆ ನಡೆದಿದೆ. ಪತಿ ದೆಹಲಿಯಲ್ಲಿ ವಾಸವಾಗಿದ್ದಾನಂತೆ. ಮಹಿಳೆ ಕೂಡ ಕೆಲ ದಿನಗಳ ಹಿಂದೆ ಪತಿ ಜೊತೆ ದೆಹಲಿಗೆ ಬಂದಿದ್ದಾಳೆ. ಪತಿ, ಪತ್ನಿಯರನ್ನು ಬದಲಿಸುವ ಕ್ಲಬ್ ಸದಸ್ಯ ಎಂಬುದು ಆಕೆಗೆ ಗೊತ್ತಾಗಿದೆ. ಪತಿ, ಪರಸ್ತ್ರೀ ಜೊತೆ ಸಂಬಂಧವಿರುವುದನ್ನು ಒಪ್ಪಿಕೊಂಡಿದ್ದಾನೆ. ಹಾಗೆ ನೀನೂ ನನ್ನ ಸ್ನೇಹಿತರ ಜೊತೆ ಸಂಬಂಧ ಬೆಳೆಸಬೇಕೆಂದು ಒತ್ತಡ ಹೇರಿದ್ದಾನೆ.

ಇದನ್ನು ಅತ್ತೆ, ಮೈದುನನಿಗೆ ಹೇಳಿದ್ರೆ ಅವ್ರು ಮನೆ ಶಾಂತಿ ಕಾಪಾಡುವಂತೆ ಸಲಹೆ ನೀಡಿದ್ದಾರಂತೆ. ಒಂದು ರಾತ್ರಿ ಪತಿ ಸ್ನೇಹಿತರಿಬ್ಬರು ರೂಮಿಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾರಂತೆ. ಮಹಿಳೆ ಕೂಗಿಕೊಳ್ತಿದ್ದಂತೆ ಕೋಣೆಗೆ ಬಂದ ಪತಿ, ಪತ್ನಿಗೆ ಹೊಡೆದು ಸಂಬಂಧ ಬೆಳೆಸುವಂತೆ ಬೆದರಿಸಿದ್ದಾನಂತೆ. ಮಹಿಳೆ ಪತಿ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...