alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿ ಪತ್ನಿಯ ಕಣ್ಣೆದುರಲ್ಲೇ ಬರ್ಬರವಾಗಿ ಕೊಲೆಯಾದ ಪತಿ

amit-nayyar-mamata-jaipur_650x400_41495050586

ಜೈಪುರದಲ್ಲಿ ಗರ್ಭಿಣಿ ಪತ್ನಿಯ ಕಣ್ಣೆದುರಲ್ಲೇ ಪತಿಯನ್ನು ಹತ್ಯೆ ಮಾಡಲಾಗಿದೆ. ತನ್ನ ಪೋಷಕರೇ ಸುಪಾರಿ ಹಂತಕರ ಮೂಲಕ ಈ ಕೃತ್ಯ ಮಾಡಿಸಿದ್ದಾರೆ ಅಂತಾ ನೊಂದ ಪತ್ನಿ ಆರೋಪಿಸಿದ್ದಾಳೆ. 30 ವರ್ಷದ ಮಮತಾ ಚೌಧರಿ ಎಂಬಾಕೆ ಒಂದೂವರೆ ವರ್ಷಗಳ ಹಿಂದೆ ಕೇರಳದ ಅಮಿತ್ ನಯ್ಯರ್ ನನ್ನು ಮದುವೆಯಾಗಿದ್ಲು. ಇಬ್ಬರೂ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದಾಗ ಪ್ರೀತಿಸಲಾರಂಭಿಸಿದ್ದರು.

ಮಮತಾ ಕುಟುಂಬದವರು ರಾಜಸ್ತಾನದ ಜಾಟ್ ಸಮುದಾಯಕ್ಕೆ ಸೇರಿದವರು. ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ ಮಮತಾ ಮತ್ತು ಅಮಿತ್ ವಿವಾಹಕ್ಕೆ ಒಪ್ಪಿರಲಿಲ್ಲ. ಪೋಷಕರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡ ಜೋಡಿ ಜೈಪುರದಲ್ಲಿ ನೆಲೆಸಿದ್ದರು. ಎಂಜಿನಿಯರ್ ಆಗಿರೋ ಅಮಿತ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಾ ಇದ್ದ.

ಬುಧವಾರ ಮಮತಾ ತಂದೆ ಜೀವನ್ ರಾಮ್ ಚೌಧರಿ ಹಾಗೂ ತಾಯಿ ಕರೆ ಮಾಡಿದ್ದರು. ಮದುವೆಯಾದ ಮೇಲೆ ಮೊದಲ ಬಾರಿ ಹೆತ್ತವರು ಕರೆ ಮಾಡಿದ್ದು ನೋಡಿ, ಮತ್ತೆ ಕುಟುಂಬ ಒಂದಾಗಬಹುದು ಎಂಬ ಆಶಾಭಾವ ಮಮತಾಳಲ್ಲಿತ್ತು. ಮಮತಾ ಈಗ 6 ತಿಂಗಳ ಗರ್ಭಿಣಿ. ತಂದೆ-ತಾಯಿ ಇಬ್ಬರೂ ಮಮತಾಳ ಮನೆಗೆ ಬಂದಿದ್ರು. ಕುಳಿತು ಚಹಾ ಕುಡಿಯುತ್ತಿದ್ರು.

ಈ ವೇಳೆ ಮನೆಯೊಳಕ್ಕೆ ನುಗ್ಗಿದ ಇಬ್ಬರು ಅಮಿತ್ ನನ್ನು ಎಳೆದುಕೊಂಡು ಬಂದು ಎದೆ, ಕತ್ತು ಸೇರಿದಂತೆ ಎಲ್ಲಾ ಕಡೆ ನಾಲ್ಕು ಗುಂಡು ಹಾರಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಅಮಿತ್ ಮೃತಪಟ್ಟಿದ್ದಾನೆ. ಹತ್ಯೆ ಬಳಿಕ ಮಮತಾಳ ಹೆತ್ತವರು ಕೂಡ ಪರಾರಿಯಾಗಿದ್ದಾರೆ. ಗರ್ಭಿಣಿ ಪತ್ನಿಯ ಕಣ್ಣೆದುರಲ್ಲೇ ಪತಿಯ ಬರ್ಬರ ಹತ್ಯೆ ನಡೆದಿದೆ. ಈ ಘಟನೆಯಲ್ಲಿ ಹೆತ್ತವರ ಕೈವಾಡವಿದೆ ಅಂತಾ ಮಮತಾ ದೂರು ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...