alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಪತ್ನಿ ಜೊತೆ ಕಾರಿನಲ್ಲಿದ್ದವನು ಯಾರು…?

ಕಾನ್ಪುರದಲ್ಲಿ ಕಳೆದ ರಾತ್ರಿ ಶ್ರೀಮಂತ ಕುಟುಂಬದ ಹೈಡ್ರಾಮಾವೊಂದು ಎಲ್ಲರನ್ನು ರಂಜಿಸ್ತು. ಪತ್ನಿಯೊಂದಿಗೆ ಕಾರಿನಲ್ಲಿದ್ದ ಪ್ರೇಮಿಯನ್ನು ನೋಡಿ ಕೆಂಡಾಮಂಡಲನಾದ ಪತಿ ಅಲ್ಲಿಯೇ ಎರಡೇಟು ನೀಡಿ ಮನೆ ಜಗಳವನ್ನು ಬೀದಿ ರಂಪ ಮಾಡಿದ್ದಾನೆ.

ವಾಸ್ತವವಾಗಿ ಅಜಯ್ ಸಿಂಗ್ ಹಾಗೂ ಜ್ಯೋತಿಗೆ ಐದು ವರ್ಷಗಳ ಹಿಂದೆ ಮದುವೆಯಾಗಿದೆ. ದಂಪತಿಗೆ ಎರಡುವರೆ ವರ್ಷದ ಮಗುವಿದೆ. ಪತ್ನಿ ಜ್ಯೋತಿ ತನ್ನ ಪ್ರೇಮಿ ಶಿವಂ ಜೊತೆ ಕಾರಿನಲ್ಲಿ ಹೋಗ್ತಿರುವುದನ್ನು ಅಜಯ್ ನೋಡಿದ್ದಾನೆ. ತಕ್ಷಣ ಕಾರು ಅಡ್ಡಗಟ್ಟಿ ಇಬ್ಬರಿಗೂ ಥಳಿಸಿದ್ದಾನೆ.

ಆದ್ರೆ ಪತಿ ಆರೋಪವನ್ನು ಜ್ಯೋತಿ ತಳ್ಳಿ ಹಾಕಿದ್ದಾಳೆ. ನಮ್ಮಿಬ್ಬರ ನಡುವೆ ಯಾವ ಸಂಬಂಧವೂ ಇಲ್ಲ. ನಾನು ಹೊರಗೆ ಹೊರಟಿದ್ದೆ. ದಾರಿ ಮಧ್ಯೆ ನನ್ನನ್ನು ನೋಡಿದ ಸ್ನೇಹಿತ ಶಿವಂ ಡ್ರಾಪ್ ಕೊಡುವುದಾಗಿ ಹೇಳಿದ ಎಂದಿದ್ದಾಳೆ. ಜೊತೆಗೆ ಪತಿ ವಿರುದ್ಧ ಆರೋಪ ಹೊರಿಸಿದ್ದಾಳೆ. ಪತಿ ಸುಳ್ಳು ಹೇಳಿ ನನ್ನನ್ನು ಮದುವೆಯಾದ. ನಂತ್ರ ವರದಕ್ಷಿಣೆ ಕಿರುಕುಳ ಶುರುಮಾಡಿದ. 2016ರಲ್ಲಿ ದೂರು ನೀಡಿದ್ದೆ. ಕ್ಷಮೆ ಕೇಳಿದ ನಂತ್ರ ಮಗಳಿಗಾಗಿ ಗಂಡನ ಮನೆಯಲ್ಲಿದ್ದೆ ಎಂದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...