alex Certify
ಕನ್ನಡ ದುನಿಯಾ       Mobile App
       

Kannada Duniya

ನೈಟಿಯಲ್ಲೇ ಸಿಕ್ಕಿಬಿದ್ದಿದ್ದ ಪತ್ನಿಯ ಪ್ರಿಯಕರ

lover

ಪುಣೆಯಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ನೈಟಿ ತೊಟ್ಟು ಸ್ನೇಹಿತನ ಪತ್ನಿ ಜೊತೆ ಚಕ್ಕಂದವಾಡುತ್ತಿದ್ದವ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ರಾಜೇಶ್ ಘಿಸುಲಾಲ್ ಮೆಹ್ತಾ ಎಂಬಾತ ಬಿಬ್ವೆವಾಡಿಯ ಗಂಗಾಧಾಮ್ ಚೌಕ್ ನಿವಾಸಿ. ಪಾತ್ರೆ ವ್ಯಾಪಾರಿಯೊಬ್ಬನ ಸ್ನೇಹಿತ. ವ್ಯಾಪಾರಿ ಇಬ್ಬರು ಮಕ್ಕಳು ಮತ್ತು ಪತ್ನಿ ಜೊತೆಗೆ ವಾಸವಾಗಿದ್ದಾನೆ.

ಇವರ ಮನೆಗೆ ಮೆಹ್ತಾ ಆಗಾಗ ಬರ್ತಾ ಇದ್ದ. ಆದ್ರೆ ತಾನು ಮನೆಯಲ್ಲಿ ಇಲ್ಲದ ಸಮಯದಲ್ಲೂ ಮೆಹ್ತಾ ಬರ್ತಿರೋ ವಿಚಾರವನ್ನ ಸೆಕ್ಯೂರಿಟಿ ಗಾರ್ಡ್ ನಿಂದ ತಿಳಿದ ವ್ಯಾಪಾರಿಗೆ ಅನುಮಾನ ಬಂದಿತ್ತು. ಸುಮಾರು 7 ವರ್ಷಗಳಿಂದ ಆತನ ಪತ್ನಿ ಹಾಗೂ ಮೆಹ್ತಾ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಗೊತ್ತಾಗ್ತಿದ್ದಂತೆ ತನ್ನ ಮನೆಗೆ ಕಾಲಿಡಬೇಡ ಅಂತಾ ಮೆಹ್ತಾಗೆ ಆತ ಹೇಳಿಬಿಟ್ಟಿದ್ದ.

ಕೆಲವೊಮ್ಮೆ ವ್ಯಾಪಾರಿ ಮನೆಯಲ್ಲಿದ್ದಾಗ್ಲೇ ಮೆಹ್ತಾ ಬರ್ತಾ ಇದ್ದ. ಅಕ್ಕಪಕ್ಕದವರು ಗುರುತಿಸಬಾರದು ಅನ್ನೋ ಕಾರಣಕ್ಕೆ ಹೆಂಗಸರ ಗೌನ್ ತೊಟ್ಟು, ದುಪ್ಪಟ್ಟಾದಿಂದ ಮುಖ ಮುಚ್ಚಿಕೊಂಡು ಬರ್ತಿದ್ದ. ನಂತರ ವ್ಯಾಪಾರಿಗೆ ಡ್ರಗ್ಸ್ ಕೊಟ್ಟು ದೀರ್ಘ ನಿದ್ದೆಗೆ ಜಾರುವಂತೆ ಮಾಡಿ ಅವನ ಪತ್ನಿ ಜೊತೆ ಸಮಯ ಕಳೆಯುತ್ತಿದ್ದ. ಅವತ್ತೊಂದು ದಿನ ಬೆಳಗ್ಗೆ ಬೇಗ ಎದ್ದು ಪತ್ನಿ ಜೊತೆ ಜಿಮ್ ಗೆ ಹೋಗಿ ಬಂದ ವ್ಯಾಪಾರಿ 11 ಗಂಟೆ ವೇಳೆಗೆ ಮಲಗಿ ನಿದ್ದೆ ಹೋಗಿದ್ದ.

ಈ ವೇಳೆ ನೈಟಿ ತೊಟ್ಟು ಮನೆಯೊಳಕ್ಕೆ ಬಂದಿದ್ದ ಮೆಹ್ತಾ, ವ್ಯಾಪಾರಿಯ ಪ್ರಜ್ಞೆ ತಪ್ಪಿಸಲು ಮೂಗಿನ ಬಳಿ ಕ್ಲೋರೋಫಾರ್ಮ್ ಕೊಂಡೊಯ್ದಿದ್ದ. ಇದ್ದಕ್ಕಿದ್ದಂತೆ ಅವನಿಗೆ ಎಚ್ಚರವಾಯ್ತು. ಯಾರು ಅಂತಾ ಕೂಗಿಕೊಂಡಾಗ ಮೆಹ್ತಾ ಅವನನ್ನು ಥಳಿಸಿದ್ದಾನೆ. ಗಾಬರಿಯಿಂದ ಓಡಿ ಹೋದ ವ್ಯಾಪಾರಿ ಪಕ್ಕದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ. ಇಷ್ಟೊತ್ತಲ್ಲಿ ಮನೆಗೆ ಬಂದವರು ಯಾರು ಅಂತಾ ಕೇಳಿದ್ದಕ್ಕೆ ಪತ್ನಿ ತನಗೆ ಗೊತ್ತೇ ಇಲ್ಲ ಎಂದುಬಿಟ್ಲು.

ಕೂಡಲೇ ಓಡಿ ಬಂದ ಆತ ನೈಟಿ ತೊಟ್ಟಿದ್ದ ವ್ಯಕ್ತಿಯನ್ನು ಹಿಡಿದ, ಮುಖಕ್ಕಿದ್ದ ದುಪ್ಪಟ್ಟಾ ಸರಿಸಿ ನೋಡಿದವನಿಗೆ ಶಾಕ್, ನೈಟಿಯೊಳಗಿದ್ದವ ಅದೇ ರಾಜೇಶ್ ಮೆಹ್ತಾ. ಅಷ್ಟರಲ್ಲಿ ಕ್ಲೋರೋಫಾರ್ಮ್ ಪ್ರಭಾವದಿಂದ ವ್ಯಾಪಾರಿಗೆ ನಿಧಾನವಾಗಿ ಪ್ರಜ್ಞೆತಪ್ಪಲಾರಂಭಿಸಿತ್ತು. ಮತ್ತೆ ಆತನ ಮೇಲೆ ಹಲ್ಲೆ ಮಾಡಿದ ಮೆಹ್ತಾ, ಕೊಲ್ಲುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದ. ಸದ್ಯ ಕೇಸ್ ದಾಖಲಿಸಿಕೊಂಡು ಪೊಲೀಸರು ಮೆಹ್ತಾನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...