alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ ಪತ್ನಿ ಕೇಳಿದ್ಲು ಅದನ್ನ.. ಗಂಡ ಮಾಡಿದ ಕೊಲೇನಾ..!

wife-murdered-

ಸುಂದರ ಪತ್ನಿ ಆ ರಾತ್ರಿ ಗಂಡನ ಜೊತೆ ಮಾತನಾಡಿದ್ದೇ ತಪ್ಪಾಯ್ತು. ಹೆಂಡತಿ ಬೇಡಿಕೆ ಕೇಳಿ ಕೋಪಗೊಂಡ ಪತಿ, ಕತ್ತು ಹಿಸುಕಿ ಪತ್ನಿಯನ್ನು ಕೊಲೆಗೈದಿದ್ದಾನೆ.

ಘಟನೆ ಪಂಜಾಬಿನ ಜಲಂಧರ್ ನಲ್ಲಿ ನಡೆದಿದೆ. ರಾಜೇಂದ್ರ ಕುಮಾರ್ ಹತ್ಯೆ ಮಾಡಿದ ಪಾಪಿ. huಶಿವಾನಿ ಕೊಲೆಯಾದ ಪತ್ನಿ. ರಾಜೇಂದ್ರನಿಗೆ ಕುಡಿಯುವ ಚಟವಿತ್ತಂತೆ. ಪ್ರತಿದಿನ ಮನೆಗೆ ಕುಡಿದು ಬರ್ತಿದ್ದನಂತೆ. ಇದು ಶಿವಾನಿಗೆ ಇಷ್ಟವಿರಲಿಲ್ಲವಂತೆ. ಒಂದು ಚಿಕ್ಕ ಹೊಟೇಲ್ ನಲ್ಲಿ ಕೆಲಸ ಮಾಡ್ತಿದ್ದ ಶಿವಾನಿ ಹಣದ ಮೇಲೂ ಪತಿ ಕಣ್ಣು ಹಾಕಿದ್ದನಂತೆ.

ಎಂದಿನಂತೇ ಅಂದೂ ರಾಜೇಂದ್ರ ಕುಡಿದು ಬಂದಿದ್ದಾನೆ. ಹಾಸಿಗೆಯಲ್ಲಿ ಮಲಗಿದ್ದ ಪತ್ನಿ ಬಳಿ ಹೋಗಿ ಮಲಗಿದ್ದಾನೆ. ಇಬ್ಬರೂ ಮಾತನಾಡಿದ್ದಾರೆ. ಈ ವೇಳೆ ಶಿವಾನಿ, ಕುಡಿತ ಬಿಡುವಂತೆ ಹೇಳಿದ್ದಾಳೆ. ಸಿಟ್ಟಿಗೆದ್ದ ರಾಜೇಂದ್ರ ಹೆಂಡತಿ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ.

ಮನೆಯಲ್ಲಿ ಶವ ಸಿಕ್ಕ ನಂತರ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಕುಟುಂಬದವ ಹೇಳಿಕೆ ಆಧಾರದ ಮೇಲೆ ರಾಜೇಂದ್ರನನ್ನು ಬಂಧಿಸಿದ್ದಾರೆ. ಪೊಲೀಸ್ ಏಟಿಗೆ ರಾಜೇಂದ್ರ ಸತ್ಯ ಒಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...