alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿರುವ ಪತಿಗೆ ಪತ್ನಿ ಮಾಡಿದ್ಲು ಇಂಥ ಮೋಸ

mush-26

ಉದ್ಯೋಗದ ನಿಮಿತ್ತ ದುಬೈನಲ್ಲಿ ನೆಲೆಸಿದ್ದ ಪತಿಗೆ ಪತ್ನಿ ಪಂಗನಾಮ ಹಾಕಿದ್ದಾಳೆ. ಮೀರತ್ ನ ಕಾಶಿರಾಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವಿದ್ಯುತ್ ಬಾಬಾ ಹೆಸರಿನ ವ್ಯಕ್ತಿಯೊಬ್ಬ ದುಬೈನಲ್ಲಿ ಕೆಲಸ ಮಾಡ್ತಿದ್ದಾನೆ. ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾನೆ. ತನ್ನ ಪತ್ನಿ ಹಾಗೂ ಮಕ್ಕಳನ್ನು ಕಾಶಿರಾಂ ಗ್ರಾಮದಲ್ಲಿಯೇ ಬಿಟ್ಟು ಹೋಗಿದ್ದ. ಪತಿ ಜೊತೆ ಸದಾ ಫೋನ್ ನಲ್ಲಿ ಮಾತನಾಡ್ತಾ ಇದ್ದ ಪತ್ನಿ ಗಂಡನಿಗೆ ಅನುಮಾನ ಬರದಂತೆ ನಡೆದುಕೊಂಡಿದ್ದಾಳೆ.

ಪ್ರತಿ ತಿಂಗಳು 20 ಸಾವಿರ ರೂಪಾಯಿಯನ್ನು ಗಂಡನಿಂದ ಪಡೆದಿದ್ದಾಳೆ. ಕೆಲ ದಿನಗಳ ಹಿಂದೆ ದುಬೈನಿಂದ ಊರಿಗೆ ಬಂದ ವಿದ್ಯುತ್ ಬಾಬಾ ದಂಗಾಗಿದ್ದಾನೆ. ಮನೆ ಬಾಗಿಲು ಹಾಕಿದ್ದರಿಂದ ಪಕ್ಕದ ಮನೆಯವರನ್ನು ಹೆಂಡತಿ ಎಲ್ಲಿ ಎಂದು ವಿಚಾರಿಸಿದ್ದಾನೆ. ಮನೆ ಮಾರಿ ಹೆಂಡತಿ ಬೇರೆ ಎಲ್ಲಿಗೋ ಹೋಗಿದ್ದಾಳೆಂದು ಅಕ್ಕಪಕ್ಕದವರು ಹೇಳಿದ್ದಾರೆ. ಈ ಬಗ್ಗೆ ಹೆಂಡತಿ ತಂದೆ ಮನೆಯವರನ್ನು ಕೇಳಿದ್ರೆ ಅವರು ಬೆದರಿಕೆಯೊಡ್ಡಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...