alex Certify
ಕನ್ನಡ ದುನಿಯಾ       Mobile App
       

Kannada Duniya

22 ವರ್ಷಗಳ ನಂತ್ರ ಪತ್ನಿಯನ್ನು ಮನೆಯಿಂದ ಹೊರ ಹಾಕಿದ

ಸಾಮಾನ್ಯವಾಗಿ ಮದುವೆಯಾಗಿ ಮಕ್ಕಳಾದ್ಮೇಲೆ ದಾಂಪತ್ಯ ಸರಾಗವಾಗಿ ನಡೆಯುತ್ತೆ ಎಂದು ನಂಬಲಾಗುತ್ತದೆ. ಮದುವೆಯಾದ ಒಂದೈದು ವರ್ಷ ಸುಖ ಸಂಸಾರ ನಡೆಸಿದಲ್ಲಿ ಮುಂದೆ ಯಾವ ಸಮಸ್ಯೆ ಬರುವುದಿಲ್ಲವೆಂದು ಹುಡುಗಿ ಕಡೆಯವರು ನೆಮ್ಮದಿಯಿಂದಿರುತ್ತಾರೆ. ಆದ್ರೆ ಮದುವೆಯಾಗಿ 22 ವರ್ಷವಾದ್ಮೇಲೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಪೀಡಿತ ಮಹಿಳೆಯೊಬ್ಬಳು ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾಳೆ. ಮಹಿಳೆ ಮೂರು ಮಕ್ಕಳ ತಾಯಿ. 18 ವರ್ಷ ಹಾಗೂ 7 ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆ 14 ವರ್ಷದ ಗಂಡು ಮಗ ಇದ್ದಾನೆ. ಇಷ್ಟಾಗಿಯೂ ಗಂಡ ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ.

ನಂತ್ರ ಆಟೋ ಖರೀದಿಗೆ 2 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದಾನೆ. ಮಹಿಳೆ ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ. ನಂತ್ರ ಆಕೆ ಸಹೋದರರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಆದ್ರೆ ಇದ್ಯಾವುದಕ್ಕೂ ಜಗ್ಗದ ಪತಿ ತನ್ನ ಸಹೋದರರ ಜೊತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...