alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮಾಡಿದ ಈ ಕೆಲಸಕ್ಕೆ ಟವರ್ ಏರಿ ಕುಳಿತ ಪತಿ

ತೆಲಂಗಾಣದಲ್ಲಿ ವೈದ್ಯ ಪತಿಯೊಬ್ಬನ ವರ್ತನೆ ಚರ್ಚೆಗೆ ಕಾರಣವಾಗಿದೆ. ವೈದ್ಯ ಪತಿಯೊಬ್ಬ ಪತ್ನಿಯಿಂದ ವಿಚ್ಛೇದನ ಪಡೆಯಲು ಟವರ್ ಸಹಾಯ ಪಡೆದಿದ್ದಾನೆ. 40 ಅಡಿ ಎತ್ತರದ ಟವರ್ ಮೇಲೆ ಹತ್ತಿದ ವೈದ್ಯನನ್ನು ಪೊಲೀಸರು ಹರಸಾಹಸ ಮಾಡಿ ಕೆಳಗಿಳಿಸಿದ್ದಾರೆ.

ತೆಲಂಗಾಣದ ಅರಪಲ್ಲಿಯಲ್ಲಿ ಘಟನೆ ನಡೆದಿದೆ. ವೈದ್ಯ ಅಜಯ್ ಹಾಗೂ ಲಾಸ್ಯ ಮದುವೆ 7 ವರ್ಷಗಳ ಹಿಂದೆ ನಡೆದಿತ್ತು. ದಂಪತಿಗೆ ಒಂದು ಮಗಳಿದ್ದಾಳೆ. ಕೆಲ ದಿನಗಳ ಹಿಂದೆ ಲಾಸ್ಯ, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. ಆದ್ರೆ ಪತ್ನಿ ಸುಳ್ಳು ಹೇಳ್ತಿದ್ದಾಳೆ. ನನ್ನನ್ನು ಮನೆಯಿಂದ ಹೊರಗೆ ಹಾಕಿರುವ ಪತ್ನಿ, ಮಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾಳೆಂದು ಅಜಯ್ ಆರೋಪಿಸಿದ್ದಾನೆ.

ಪತ್ನಿಯಿಂದ ವಿಚ್ಛೇದನ ಕೊಡಿಸಿ ಮಗಳನ್ನು ತನಗೆ ನೀಡಬೇಕೆಂಬುದು ಅಜಯ್ ವಾದವಾಗಿದೆ. ಸದ್ಯ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...