alex Certify
ಕನ್ನಡ ದುನಿಯಾ       Mobile App
       

Kannada Duniya

ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಪತ್ನಿಗೆ ಪತಿ ನೀಡ್ತ ಇಂಥ ಶಿಕ್ಷೆ

ಮನೆಗೆ ಮಗು ಬಂದ್ರೆ ಮನೆಯ ಸಂತೋಷ ದುಪ್ಪಟ್ಟಾಗುತ್ತದೆ. ದಂಪತಿ ಮತ್ತಷ್ಟು ಹತ್ತಿರವಾಗ್ತಾರೆ. ಆದ್ರೆ ಪತ್ನಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ವಿಷ್ಯ ಕೇಳಿ ಪತಿ ಮಾಡಿದ ಕೆಲಸ ಕೇಳಿದ್ರೆ ನೀವು ದಂಗಾಗ್ತಿರಾ. ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರಿಂದ ಕೋಪಗೊಂಡ ಪತಿಯೊಬ್ಬ ಪತ್ನಿಗೆ ಹೊಡೆದಿದ್ದಾನೆ. ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದಾನೆ.

ಡೆಹ್ರಾಡೂನ್ ಲಕ್ಸರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಇಂದೂ ಎಂಬಾಕೆಯ ಮದುವೆ ಯೋಧನೊಬ್ಬನ ಜೊತೆ ನಡೆದಿತ್ತು. ಮದುವೆ ವೇಳೆ ವರದಕ್ಷಿಣೆ ನೀಡಲಾಗಿತ್ತು. ಆದ್ರೆ ಇದ್ರಿಂದ ಖುಷಿಯಾಗದ ಆಕೆಯ ಗಂಡನ ಮನೆಯವರು ಚಿತ್ರಹಿಂಸೆ ನೀಡುತ್ತಿದ್ದರಂತೆ. ಕೆಲ ದಿನಗಳ ಹಿಂದೆ ಇಂದೂ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆ ನಂತ್ರ ಆಕೆ ಸ್ಥಿತಿ ದುಸ್ಥರವಾಗಿದೆ.

ರಜೆ ಮೇಲೆ ಊರಿಗೆ ಬಂದ ಯೋಧ, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಈ ವಿಷ್ಯ ಇಂದೂ ತವರಿಗೆ ತಿಳಿದಿದೆ. ಅವ್ರು ಪೊಲೀಸರಿಗೆ ದೂರು ನೀಡುವ ಜೊತೆಗೆ ಇಂದೂವನ್ನು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...