alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ತೀರಿಸಲು ಪತ್ನಿಯನ್ನು ಸ್ನೇಹಿತರಿಗೆ ನೀಡಿದ

ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಘಟನೆ ರಾಜಸ್ಥಾನದ ಸಿಖರ್ ನಲ್ಲಿ ನಡೆದಿದೆ.

2010ರಲ್ಲಿ ಜೈಪುರ ಯುವಕನ ಜೊತೆ ಮಹಿಳೆ ಮದುವೆಯಾಗಿತ್ತು. ಮದುವೆ ವೇಳೆ ಐದು ಲಕ್ಷ ರೂಪಾಯಿ ನಗದು ಹಾಗೂ ಬಂಗಾರವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದ್ರೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಪತಿ, ಅತ್ತೆ, ಮಾವ, ಮೈದುನ ಸೇರಿದಂತೆ ಮನೆಯವರೆಲ್ಲ ಹೊಡೆಯುತ್ತಿದ್ದರಂತೆ.

ಮದ್ಯವ್ಯಸನಿ ಪತಿ ಮೈತುಂಬ ಸಾಲ ಮಾಡಿಕೊಂಡಿದ್ದಾನಂತೆ. ಸಾಲದ ಬದಲು ಪತ್ನಿಯನ್ನು ಸ್ನೇಹಿತರಿಗೆ ನೀಡ್ತಿದ್ದ ಎಂದು ಮಹಿಳೆ ದೂರಿದ್ದಾಳೆ. ಸ್ನೇಹಿತರಿಂದ ಅತ್ಯಾಚಾರವೆಸಗಿಸಿದ್ದಲ್ಲದೆ ನಶೆ ಬರುವ ಪದಾರ್ಥವನ್ನು ತಿನ್ನಿಸುತ್ತಿದ್ದನಂತೆ. ಇಷ್ಟು ಮಾಡಿದ್ರೂ ಪತ್ನಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅನಾಥಾಶ್ರಮದಲ್ಲಿ ಬಿಟ್ಟು ಹೋಗಿದ್ದನಂತೆ. ಎಲ್ಲ ವಿಚಾರವನ್ನೂ ತವರಿಗೆ ತಿಳಿಸಿದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...