alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಸತ್ತ: ಅಂತಿಮ ಸಂಸ್ಕಾರದ ವೇಳೆ ನಡೀತು..!

images

ಡೆಹ್ರಾಡೂನ್ ನಲ್ಲಿ ಶುಕ್ರವಾರ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಪತ್ನಿಯ ಸಾವಿನ ಸುದ್ದಿ ಕೇಳ್ತಾ ಇದ್ದಂತೆ ಪತಿ ಕೂಡ ಸಾವನ್ನಪ್ಪಿದ್ದಾನೆ. ಆದ್ರೆ ಆಚಾನಕ್ ಪತ್ನಿ ಉಸಿರಾಡಲು ಶುರುಮಾಡಿದ್ದಾಳೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ರಂಜಾನ್ ದಿನ ಡೆಹ್ರಾಡೂನ್ ನ ಖಾಸಗಿ ಆಸ್ಪತ್ರೆಗೆ ಮಹಿಳೆಯೊಬ್ಬಳನ್ನು ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ 48 ಗಂಟೆಯೊಳಗೆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ  ಪತ್ನಿ ಸಾವಿನ ಸುದ್ದಿ ಕೇಳ್ತಿದ್ದಂತೆ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಶವಪರೀಕ್ಷೆ ನಡೆಸುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಆದ್ರೆ ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಒಪ್ಪಿಲ್ಲ. ಆಸ್ಪತ್ರೆ ಬಿಲ್ ತುಂಬಿ ಹೆಣವನ್ನು ಶುಕ್ರವಾರ ಮನೆಗೆ ತಂದ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆ ನಡೆಸಿದ್ದಾರೆ. ಈ ವೇಳೆ ಅಚಾನಕ್ ಮಹಿಳೆ ಉಸಿರಾಡಲು ಶುರುಮಾಡಿದ್ದಾಳೆ. ಕಂಗಾಲಾದ ಕುಟುಂಬಸ್ಥರು ಮಹಿಳೆಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಿದ್ದಾರೆ.

ಮಹಿಳೆ ಸಾವನ್ನಪ್ಪಿದ್ದಾಳೆಂದು ಕುಟುಂಬಸ್ಥರಿಗೆ ಆಘಾತ ನೀಡಿ ಆಕೆ ಪತಿಯ ಸಾವಿಗೆ ಕಾರಣವಾದ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...