alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಬಲೆಗೆ ಬೀಳ್ತಿದ್ದ ಗ್ರಾಹಕರಿಗೆ ಪತಿ ಮಾಡ್ತಿದ್ದ ಮೋಸ

sex-racket

ಆನ್ಲೈಲ್ ಸೆಕ್ಸ್ ರಾಕೆಟ್ ಹೆಸರಲ್ಲಿ ಮೋಸ ಮಾಡ್ತಿದ್ದ ದಂಪತಿ ಸಿಕ್ಕಿ ಬಿದ್ದಿದ್ದಾರೆ. ಶ್ರೀಮಂತರನ್ನು ಹಳ್ಳಕ್ಕೆ ಕೆಡವಿ, ನಂತ್ರ ಬ್ಲಾಕ್ ಮೇಲ್ ಮಾಡಿ, ಅವರಿಂದ ಹಣ ಕೀಳುತ್ತಿದ್ದರಂತೆ ಈ ದಂಪತಿ. ಜನರಿಗೆ ಮೋಸ ಮಾಡ್ತಿದ್ದ ದಂಪತಿಯನ್ನು ಬಂಧಿಸಿರುವ ಮುಂಬೈ ಪೊಲೀಸರು, ಹೊಂಡಾ ಸಿಟಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಫೈಜಲ್ ಹಾಗೂ ಪತ್ನಿ ನೀತಾ ಈ ದಂಧೆ ನಡೆಸುತ್ತಿದ್ದರು. ಮುಂಬೈ ನಿವಾಸಿಗಳಾದ ಇವರು ಆನ್ಲೈನ್ ನಲ್ಲಿ ಡರ್ಟಿ ಫಿಕ್ಚರ್ ತೋರಿಸಿ ಮೋಸ ಮಾಡ್ತಾ ಇದ್ದರು. ಸಾಮಾನ್ಯರಂತೆ ಕಾಣುವ ಇವರು, ಲೂಟಿ ಮಾಡಿ ಸಿಕ್ಕಾಪಟ್ಟೆ ಹಣ ಮಾಡಿದ್ದರು. ಸ್ನೇಹದ ಹೆಸರಲ್ಲಿ ಆನ್ಲೈನ್ ನಲ್ಲಿ ಗೆಳೆತನ ಬೆಳೆಸಿ, ಬಣ್ಣ ಬಣ್ಣದ ಆಸೆ ತೋರಿಸಿ ನಂತ್ರ ಬ್ಲಾಕ್ ಮೇಲ್ ಮಾಡ್ತಿದ್ದರು.

ಸ್ನೇಹದ ಹೆಸರಲ್ಲಿ ಮೋಸ ಮಾಡ್ತಿದ್ದ ದಂಪತಿ ಕೊನೆಗೂ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ವ್ಯಕ್ತಿಯೊಬ್ಬ ಇವರ ಬಗ್ಗೆ ಮಾಹಿತಿ ನೀಡಿದ್ದನಂತೆ. ಆದ್ರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ದಂಪತಿ ಫೋನ್ ಕರೆ ಹಾಗೂ ಐಪಿ ಅಡ್ರೆಸ್ ಆಧಾರದಿಂದ ದಂಪತಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...