alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಮಹಿಳೆ ವಿವರ ಪಡೆಯಲೋದ ಪೊಲೀಸರಿಗೆ ಕಾದಿತ್ತು ಅಚ್ಚರಿ

1 ಕೋಟಿ ರೂಪಾಯಿ ಇನ್ಶೂರೆನ್ಸ್ ಹಣ ಪಡೆಯಲು ಪತಿಯೇ ತನ್ನ ಪತ್ನಿಯ ನಕಲಿ ಡೆತ್ ಸರ್ಟಿಫಿಕೇಟ್ ನೀಡಿದ್ದ ಪ್ರಕರಣ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ನ ಪ್ರತಿಷ್ಟಿತ ಬಂಜಾರಾ ಹಿಲ್ಸ್ ನಲ್ಲಿ ದಂಪತಿಗಳು ವಾಸವಾಗಿದ್ದು, ಪತ್ನಿಯ ಹೆಸರಿನಲ್ಲಿ 1 ಕೋಟಿ ರೂ. ಇನ್ಶೂರೆನ್ಸ್ ಮಾಡಿಸಿದ್ದ ಪತಿ, ಇತ್ತೀಚೆಗೆ ತನ್ನ ಪತ್ನಿ ಸಾವಿಗೀಡಾಗಿದ್ದು, ಆಕೆಯ ಇನ್ಶೂರೆನ್ಸ್ ಹಣ ಪಾವತಿಸುವಂತೆ ಕೋರಿದ್ದಾನೆ. ಜೊತೆಗೆ ಡೆತ್ ಸರ್ಟಿಫಿಕೇಟ್ ಸಹ ಹಾಜರುಪಡಿಸಿದ್ದಾನೆ

ಆದರೆ ಡೆತ್ ಸರ್ಟಿಫಿಕೇಟ್ ಕುರಿತು ಅನುಮಾನಗೊಂಡ ಇನ್ಶೂರೆನ್ಸ್ ಕಂಪನಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಪತ್ನಿ ಜೀವಂತವಾಗಿರುವುದು ತನಿಖೆ ವೇಳೆ ಕಂಡು ಬಂದಿದ್ದು, ಆಕೆಯನ್ನು ಈಗ ವಶಕ್ಕೆ ಪಡೆಯಲಾಗಿದೆ. ತನ್ನ ವಂಚನೆ ಬಯಲಾಗಿರುವುದು ಅರಿವಿಗೆ ಬರುತ್ತಿದ್ದಂತೆಯೇ ಆಕೆಯ ಪತಿ ಪರಾರಿಯಾಗಿದ್ದು, ದಂಪತಿಗಳ ವಿರುದ್ದ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...