alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಕದಿಯಲು ಮಾಡಿದ್ರು ಖತರ್ನಾಕ್ ‘ಪ್ಲಾನ್’…!

ಮಂಗಳವಾರ ರಾತ್ರಿ ದೆಹಲಿಯ ದ್ವಾರಕಾ ಬಳಿಯ ಸೂರಜ್ ವಿಹಾರ್ ನಲ್ಲಿ ಭಾರೀ ಸ್ಫೋಟವೊಂದು ಸಂಭವಿಸಿತ್ತು. ಆ ಶಬ್ಧಕ್ಕೆ ಕಟ್ಟಡಗಳೆಲ್ಲ ಗಡಗಡ ನಡುಗಿದ್ದವು. ಸ್ಥಳಕ್ಕೆ ಬಂದ ಪೊಲೀಸರಿಗೆ ಮೊದಲು ಕಣ್ಣಿಗೆ ಬಿದ್ದಿದ್ದು 8 ಅಡಿ ಆಳದ ಹೊಂಡ.

ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇಂಡಿಯನ್ ಆಯಿಲ್ ನ ಪೈಪ್ ಲೈನ್ ವರೆಗೆ ಸುರಂಗ ಕೊರೆದಿರುವುದು ಪತ್ತೆಯಾಗಿದೆ. ಪೆಟ್ರೋಲ್ ಕದಿಯಲು ಕಳ್ಳರು ಸುರಂಗ ನಿರ್ಮಿಸಿದ್ದರು. ಅತಿಯಾದ ಗ್ಯಾಸ್ ಪ್ರೆಶರ್ ನಿಂದ ಅಲ್ಲಿ ಸ್ಪೋಟ ಸಂಭವಿಸಿತ್ತು.

ಪೆಟ್ರೋಲ್ ಕಳವು ಹಗರಣದ ಕಿಂಗ್ ಪಿನ್ ಸ್ಕ್ರಾಪ್ ಡೀಲರ್ ಆಗಿರೋ ಜುಬೇರ್. ಈತನನ್ನು ಪೊಲೀಸರು ಬಂಧಿಸಿದ್ದಾರೆ. ಒಂದೇ ವಾರದಲ್ಲಿ ಸುರಂಗ ತೋಡಿ ಪೈಪ್ ಲೈನ್ ವರೆಗೂ ತಲುಪಿದ್ದ ಖದೀಮರು ಸುಮಾರು 3000 ಲೀಟರ್ ಪೆಟ್ರೋಲ್ ಕಳವು ಮಾಡಿದ್ದಾರೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುರಂಗ 150 ಅಡಿ ಉದ್ದ, 2.5 ಅಡಿ ಅಗಲವಾಗಿತ್ತು. ಚಿಕ್ಕ ಕೋಣೆಯೊಂದಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಅಲ್ಲಿ ಪೈಪ್ ಲೈನ್ ನಿಂದ ಕದ್ದ ಪೆಟ್ರೋಲ್ ಅನ್ನೆಲ್ಲ ಟ್ಯಾಂಕರ್ ಗಳಿಗೆ, ಬ್ಯಾರೆಲ್ ಗಳಿಗೆ ವರ್ಗಾಯಿಸಲಾಗುತ್ತಿತ್ತು. ಈ ಪೆಟ್ರೋಲ್ ಗೆ ಸೀಮೆ ಎಣ್ಣೆ ಮಿಶ್ರಣ ಮಾಡಿ ಖದೀಮರು ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...