alex Certify
ಕನ್ನಡ ದುನಿಯಾ       Mobile App
       

Kannada Duniya

ಹದಿಹರೆಯದ ಹುಡುಗ್ರು ಮಾಡ್ತಿದ್ರು ಖತರ್ನಾಕ್ ಕೆಲಸ

how-5-delhi-teens-robbed-delivery-boys-using-stolen-bikes-snatched-phonesಐಷಾರಾಮಿ ಜೀವನಕ್ಕಾಗಿ ದೆಹಲಿಯ ಐದು ಮಂದಿ ಹದಿಹರೆಯದ ಹುಡುಗರು ಖತರ್ನಾಕ್ ಕೆಲಸ ಮಾಡಿದ್ದಾರೆ. ಅವರ ಕಾರ್ಯ ವಿಧಾನವನ್ನು ಕಂಡು ಸ್ವತಃ ಪೊಲೀಸರೆ ದಂಗಾಗಿದ್ದಾರೆ. ಇದೀಗ ಈ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

18 ವರ್ಷದ ಹೇಮಂತ್ ಅಲಿಯಾಸ್ ಲಡ್ಡು, 19 ವರ್ಷದ ಸುನೀಲ್ ಹಾಗೂ ಮೋಹಿತ್ ಬಂಧಿತರಾಗಿದ್ದು, ಮತ್ತಿಬ್ಬರ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಬಂಧಿತರ ವಿಚಾರಣೆ ವೇಳೆ ಈ ಖತರ್ನಾಕ್ ಗ್ಯಾಂಗ್ ನ ಕೃತ್ಯ ಬಹಿರಂಗವಾಗಿದೆ.

ಮೊದಲಿಗೆ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಈ ತಂಡ, ಇದನ್ನು ದಾರಿಹೋಕರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಬಳಸುತ್ತಿತ್ತು. ನಂತರ ಬೈಕ್ ನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ತಾವು ದಾರಿಹೋಕರಿಂದ ಅಪಹರಿಸಿದ್ದ ಮೊಬೈಲ್ ಬಳಸಿ ಆನ್ ಲೈನ್ ನಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಬಟ್ಟೆ, ಶೂ ಮೊದಲಾದ ವಸ್ತುಗಳನ್ನು ಬುಕ್ ಮಾಡುತ್ತಿದ್ದರು. ಬುಕ್ ಮಾಡುವ ವೇಳೆ ಬೇಕೆಂದೇ ಸುಳ್ಳು ವಿಳಾಸ ನೀಡುತ್ತಿದ್ದು, ಡೆಲಿವರಿ ಬಾಯ್, ಬುಕ್ ಮಾಡಿದ್ದ ವಸ್ತುಗಳನ್ನು ವಿತರಿಸಲು ಬಂದಾಗ ವಿಳಾಸ ಸಿಗದೆ ಗೊಂದಲಕ್ಕೊಳಗಾಗಿ ಮೊಬೈಲ್ ಗೆ ಕರೆ ಮಾಡಿದಾಗ ನಿರ್ಜನ  ಪ್ರದೇಶಕ್ಕೆ ಆತನನ್ನು ಕರೆಸಿಕೊಳ್ಳುತ್ತಿದ್ದರು. ಅಲ್ಲಿ ಆತ ತಂದ ವಸ್ತುಗಳನ್ನು ದೋಚುತ್ತಿದ್ದರು.

ಈ ಗ್ಯಾಂಗ್ ಸದಸ್ಯರು ತಮ್ಮ ಮನೆಗಳಿಗೆ ಸಿಸಿ ಟಿವಿ ಅಳವಡಿಸಿಕೊಂಡಿದ್ದು, ಆ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ವೀಕ್ಷಿಸುತ್ತಿದ್ದರು. ಪೊಲೀಸರು ಬಂಧಿಸಲು ಬಂದರೆ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಅವರ ಗ್ರಹಚಾರ ಕೆಟ್ಟಿದ್ದು, ಡೆಲಿವರಿ ವಾಹನವೊಂದರ ಚಾಲಕನಿಗೆ ಪಿಸ್ತೂಲ್ ತೋರಿಸಿ 1 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದರು. ವಾಹನ ಚಾಲಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದಾಗ ಈ ಗ್ಯಾಂಗ್ ನ ಕೃತ್ಯ ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...