alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂಗೆ ಹಣ ಹಾಕದೆ 1.7 ಕೋಟಿ ರೂ. ಲಪಟಾಯಿಸಿದ್ದವರ ಅರೆಸ್ಟ್

ನವದೆಹಲಿ: ಎಟಿಎಂಗೆ ಹಾಕಬೇಕಾದ ಹಣವನ್ನು ದುರ್ಬಳಕೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸುಮಾರು 1.7 ಕೋಟಿ ರೂ. ಮೊತ್ತವನ್ನು ಎಟಿಎಂಗೆ ಹಾಕದೆ ದುರ್ಬಳಕೆ ಮಾಡಿದ್ದಾರೆ ಎನ್ನಲಾಗಿದೆ.

ಬಂಧಿತರನ್ನು ಮನೀಶ್‌ ಕುಮಾರ್‌ ಹಾಗೂ ಸತ್ಪಾಲ್‌ ಎಂದು ಗುರುತಿಸಲಾಗಿದೆ. ಎಸ್‌ಐಎಸ್‌ ಕ್ಯಾಶ್‌ ಸರ್ವೀಸ್‌ ಸಂಸ್ಥೆಯ ವಿಭಾಗೀಯ ಮುಖ್ಯಸ್ಥ ಪ್ರೇಮ್‌ ಸವರಿಯಾ, ವಿವಿಧ ಬ್ಯಾಂಕ್‌ಗಳ ಎಟಿಎಂಗೆ ಹಣ ತುಂಬಿಸುವ ಸಂಸ್ಥೆ ನಡೆಸುತ್ತಿದ್ದು, ಮನೀಶ್‌ ಹಾಗೂ ಸತ್ಪಾಲ್‌ 1.7 ಕೋಟಿ ರೂ. ಅನ್ನು ದುರ್ಬಳಕೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ ಎಂಬುದಾಗಿ ಡಿಸಿಪಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

ಬ್ಯಾಂಕ್‌ನಿಂದ ಪಡೆದ ಹಣವನ್ನು ಎಲ್ಲ ಸಿಬ್ಬಂದಿಗಳಿಗೆ ಹಂಚಲಾಗುತ್ತದೆ ಹಾಗೂ ಯಾವ ಎಟಿಎಂ ಗೆ ಎಷ್ಟು ಹೊತ್ತಿನೊಳಗೆ ಹಣ ತುಂಬಬೇಕು ಎಂಬುದನ್ನು ತಿಳಿಸಲಾಗುತ್ತದೆ. ಜು.27 ರಂದು ಇಬ್ಬರು ಆರೋಪಿತರಿಗೆ ನೀಡಲಾಗಿದ್ದ 1.84 ಕೋಟಿ ರೂ. ಅನ್ನು ಎಟಿಎಂಗೆ ತುಂಬದೆ ವಾಪಾಸ್‌ ಕಚೇರಿಗೆ ತಂದಿದ್ದಾರೆ. ಬಳಿಕ ಮತ್ತೆ ಅದೇ ಹಣವನ್ನು ಎಟಿಎಂಗೆ ತುಂಬುವ ನೆಪದಲ್ಲಿ ತೆಗೆದುಕೊಂಡು, ದುರ್ಬಳಕೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

1.89 ಕೋಟಿ ರೂ.ಗಳಲ್ಲಿ1.19 ಕೋಟಿ ರೂ.ಗಳನ್ನು 10 ಎಟಿಎಂಗಳಿಗೆ ಹಾಕಲಾಗಿಲ್ಲ. ಈವರೆಗೆ ಆರೋಪಿಗಳ ಬಳಿಯಿಂದ 64 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...