alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ಪೀಸ್ ಪೀಸ್ ಮಾಡಿದ ಪತಿ, ಕಾರಣ ಗೊತ್ತಾ?

ಬಳ್ಳಾರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಲೆಗೈದು, ದೇಹವನ್ನು 15 ಪೀಸ್ ಮಾಡಿ ಕಾಲುವೆಗೆ ಎಸೆದ ಘಟನೆ ಹೊಸಪೇಟೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹೊಸಪೇಟೆಯ ಸುಣ್ಣದ ಬಟ್ಟಿ ಪ್ರದೇಶದಲ್ಲಿ ವಾಸವಾಗಿರುವ ಬಟ್ಟೆ ವ್ಯಾಪಾರಿ ಮಂಗಳೂರು ಮೂಲದ ಚಂದ್ರಹಾಸ(27) ಕೊಲೆ ಆರೋಪಿ. ಪತ್ನಿ ಭಾರತಿ(24) ಅವರನ್ನು ಚಂದ್ರಹಾಸ ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

2 ವರ್ಷಗಳ ಹಿಂದೆ ಭಾರತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಚಂದ್ರಹಾಸ, ಫೆಬ್ರವರಿ 19 ರಂದು ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಕಾರು ಕೊಡಿಸುವಂತೆ ಪತ್ನಿ ಕೇಳಿದ್ದೇ ಜಗಳಕ್ಕೆ ಕಾರಣವಾಗಿದೆ.

ಜಗಳ ವಿಕೋಪಕ್ಕೆ ತಿರುಗಿ ಚಂದ್ರಹಾಸ ಪತ್ನಿಗೆ ಬಲವಾಗಿ ಹೊಡೆದ ಕಾರಣ ಆಕೆ ಮೃತಪಟ್ಟಿದ್ದಾರೆ. ಮೃತದೇಹವನ್ನು 15 ಪೀಸ್ ಗಳಾಗಿ ಕತ್ತರಿಸಿದ ಚಂಧ್ರಹಾಸ ಬ್ಯಾಗ್ ಗಳಲ್ಲಿ ತುಂಬಿ ರೈಲ್ವೇ ಸ್ಟೇಷನ್ ರಸ್ತೆ ಬಳಿ ಕಾಲುವೆಯಲ್ಲಿ ಎಸೆದಿದ್ದಾನೆ.

ಪತ್ನಿ ನಾಪತ್ತೆಯಾಗಿದ್ದಾಗಿ ಹೇಳಿ ಕುಟುಂಬದವರೊಂದಿಗೆ ತಾನೂ ಹುಡುಕಾಡಿದ್ದಾನೆ. ಬಳಿಕ ನಾಪತ್ತೆಯಾಗಿದ್ದಾನೆ. ಆತನ ಸಹೋದರ, ಚಂದ್ರಹಾಸ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಚಂದ್ರಹಾಸನನ್ನು ಪತ್ತೆ ಮಾಡಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪತ್ನಿಯನ್ನೇ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...