alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಥವಾಗಿ ಬಿದ್ದಿದ್ದ ಸೂಟ್ ಕೇಸ್ ನಲ್ಲಿತ್ತು ಗರ್ಭಿಣಿ ಶವ

ನೊಯ್ಡಾದ ರಾಷ್ಟ್ರೀಯ ಹೆದ್ದಾರಿ 24ರ ಬಳಿಯಿರೋ ಇಂದಿರಾಪುರಂನಲ್ಲಿ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಸೂಟ್ ಕೇಸ್ ನಲ್ಲಿ 5 ತಿಂಗಳ ಗರ್ಭಿಣಿಯ ಶವ ಪತ್ತೆಯಾಗಿದೆ. ಗರ್ಭಿಣಿಯ ಕತ್ತು ಮತ್ತು ಕೈಕಾಲುಗಳನ್ನು ಮುರಿದು ಸೂಟ್ ಕೇಸ್ ನಲ್ಲಿ ತುಂಬಲಾಗಿದೆ.

ಕೊಲೆಯಾದ ಮಹಿಳೆಯ ಪತಿ ನೊಯ್ಡಾದ ಮಾಲ್ ಒಂದರಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದು, ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆತನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ ಅಂತಾ ಮೃತಳ ತಂದೆ ಆರೋಪಿಸಿದ್ದಾರೆ.

ಗರ್ಭಿಣಿಯ ಶವ ತುಂಬಿದ್ದ ಸೂಟ್ ಕೇಸ್ ಅನ್ನು ಮದುವೆಯಲ್ಲಿ ಉಡುಗೊರೆಯಾಗಿ ಆತ ಮಗಳು-ಅಳಿಯನಿಗೆ ನೀಡಿದ್ದರಂತೆ. ಟವಲ್ ನಿಂದ ಉಸಿರುಗಟ್ಟಿಸಿ 2-3 ದಿನಗಳ ಹಿಂದೆಯೇ ಗರ್ಭಿಣಿಯನ್ನು ಹತ್ಯೆ ಮಾಡಿರೋ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಮಹಿಳೆ ನವೆಂಬರ್ ನಲ್ಲಿ ಶಿವಂ ಎಂಬಾತನನ್ನು ಮದುವೆಯಾಗಿದ್ದಳು. ಈ ಮದುವೆಗೆ ಶಿವಂ ಕುಟುಂಬದವರ ಸಮ್ಮತಿ ಇರಲಿಲ್ಲ. ಹಾಗಾಗಿ ಅವರು ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ, ಇನ್ನೂ 5 ಲಕ್ಷ ತರುವಂತೆ ಮಹಿಳೆಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಅಂತಾ ಆಕೆಯ ತಂದೆ ದೂರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...