alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ತಂದೆ

ತನ್ನ ಪುತ್ರಿಯ ಪ್ರೇಮ ಪ್ರಕರಣವನ್ನು ವಿರೋಧಿಸಿದ ತಂದೆ ಆಕೆಯ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅಲ್ಲಿನ ಇತಾಹ್ ಜಿಲ್ಲೆಯ ದಾಲಾಯ್ ಗ್ರಾಮದ 22 ವರ್ಷದ ನರೇಂದ್ರ ಶಕ್ಯ ಈ ಘಟನೆಯ ಬಲಿಪಶು. ಈಗ ಶೇಕಡಾ 90 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ನರಳುತ್ತಿದ್ದಾನೆ.

ಯುವತಿ ಮನೆಯ ಆಹ್ವಾನದ ಮೇರೆಗೆ ಆತ ಅವರ ಮನೆಗೆ ಹೋದಾಗ ಬಂಧನಕ್ಕೊಳಗಾಗಿದ್ದಾನೆ. ಈ ವೇಳೆ ಹುಡುಗಿ ತಂದೆ ಮತ್ತು ಇತರೆ ಸಂಬಂಧಿಗಳು ಆತನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಮಾಹಿತಿ ಪಡೆದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಹುಡುಗಿಯ ತಂದೆ ದಯಾರಾಮ್ ನನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಉಮೇಶ್ ತಲೆ ಮರೆಸಿಕೊಂಡಿದ್ದಾನೆ. ಇವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

ನರೇಂದ್ರ ಶಕ್ಯ ಮತ್ತು ಆಕೆಯ ನಡುವೆ ಸಂಬಂಧ ಇದ್ದು, ಮದುವೆಯಾಗಲು ಬಯಸಿದ್ದರು. ಆದರೆ, ಆಕೆ ಮನೆಯವರು ಅದನ್ನು ವಿರೋಧಿಸಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...