alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟೇಲ್ ನಲ್ಲಿ ರೂಂ ಮಾಡುವ ಮೊದಲು ಈ ಸುದ್ದಿ ಓದಿ

video_1493880067_749x421-1

ಮಧ್ಯಪ್ರದೇಶದ ಗ್ವಾಲಿಯರ್ ನ ಪ್ರಸಿದ್ಧ ಹೊಟೇಲ್ ನ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಬ್ಬಂದಿ ಅಶ್ಲೀಲ ವಿಡಿಯೋ ಮಾಡಿ ಸಿಕ್ಕಿ ಬಿದ್ದಿದ್ದಾರೆ.

ಬಂಧಿತರು ಹೊಟೇಲ್ ರೂಂನಲ್ಲಿರುವ ಟಿವಿಗೆ ಕ್ಯಾಮರಾ ಅಳವಡಿಸಿದ್ರು. ಅದ್ರ ಮೂಲಕ ಅಶ್ಲೀಲ ವಿಡಿಯೋ ಮಾಡಿ ದಂಪತಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ನೋಯ್ಡಾ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ ನೋಯ್ಡಾದ ವ್ಯಕ್ತಿಯೊಬ್ಬ ಗ್ವಾಲಿಯರ್ ನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಉತ್ತಮ್ ಪ್ಯಾಲೇಸ್ ಹೊಟೇಲ್ ನಲ್ಲಿ ತಂಗಿದ್ದರು. ಅಲ್ಲಿನ ಸಿಬ್ಬಂದಿ ದಂಪತಿಯ ಖಾಸಗಿ ಬದುಕಿನ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದ್ದಾರೆ. ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ನೋಯ್ಡಾ ವ್ಯಕ್ತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬಂಧಿತರಿಂದ ಪೊಲೀಸರು ಕಾಮಪ್ರಚೋದಿತ ಸಿಡಿ, ಪೆನ್ ಡ್ರೈವ್, ಮೆಮೊರಿ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಹೊಟೇಲ್ ರೂಂಗಳಲ್ಲಿ ಸ್ಪೈ ಕ್ಯಾಮರಾ ಅಳವಡಿಸ್ತಾ ಇದ್ದ ಸಿಬ್ಬಂದಿ ಹೊಟೇಲ್ ನಲ್ಲಿ ಗ್ರಾಹಕರು ನೀಡ್ತಾ ಇದ್ದ ಐಡಿ, ಫೋನ್ ನಂಬರ್ ಮೂಲಕ ಅವರನ್ನು ಬೆದರಿಸ್ತಿದ್ದರು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...