alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡನ ಎರಡನೇ ಹನಿಮೂನ್ ಸುದ್ದಿ ಕೇಳಿ ಮೊದಲನೆಯವಳು ಮಾಡಿದ್ಲು…

Burning_House

ಗಂಡ ಎರಡನೇ ಮದುವೆಯಾದ ಎಂಬ ಸುದ್ದಿ ಕೇಳಿದ ಮೊದಲ ಹೆಂಡತಿ ಕೋಪ ನೆತ್ತಿಗೇರೋದು ಸಹಜ. ಸಿಟ್ಟಿನಲ್ಲಿ ಸವತಿಯ ಜೊತೆ ಕಿತ್ತಾಡೋದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಸೌದಿ ಅರೇಬಿಯಾದಲ್ಲಿ ಒಬ್ಬ ಮಹಿಳೆ ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳಲು ಮುಂದಾಗಿದ್ದಳು. ಮಕ್ಕಳ ಜೊತೆ ತಾನು ವಾಸವಾಗಿದ್ದ ಮನೆಗೆ ಬೆಂಕಿ ಹಚ್ಚಿದ್ದಳು.

ಗಂಡ ಇನ್ನೊಂದು ಮದುವೆಯಾಗಿ ಹನಿಮೂನ್ ಗೆ ಹೊರಟಿದ್ದಾನೆ ಎಂಬ ವಿಷಯ ಆಕೆಯನ್ನು ಚಿಂತೆಗೆ ತಳ್ಳಿದೆ. ಗಂಡನ ಮೇಲೆ ಕೋಪ ಕೂಡ ಬಂದಿದ್ದರಿಂದ ಆರು ಮಕ್ಕಳ ಜೊತೆ ತಾನು ವಾಸವಾಗಿದ್ದ ಮನೆಗೆ ಬೆಂಕಿ ಹಚ್ಚಿದ್ದಾಳೆ. ಯಾವಾಗ ಬೆಂಕಿ ಜೋರಾಗಿ ಉರಿಯಲು ಶುರುವಾಯ್ತೋ ಆಗ ಕಿರುಚಿಕೊಂಡಿದ್ದಾಳೆ. ತಕ್ಷಣ ನೆರೆಯವರು ನೆರವಿಗೆ ಬಂದಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ತಾಯಿ ಸೇರಿ ಮಕ್ಕಳು ಸುರಕ್ಷಿತವಾಗಿದ್ದಾರೆಂದು ಅಗ್ನಿ ಶಾಮಕ ಸಿಬ್ಬಂದಿ ಅಧಿಕಾರಿ ತಿಳಿಸಿದ್ದಾರೆ. ಇದು ಕ್ರೈಂ ಆಗಿರುವುದರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ವಿಚಾರಣೆ ನಂತ್ರ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರು ತಪ್ಪು ಮಾಡಿದ್ದಾರೆಂಬುದನ್ನು ನಿರ್ಧರಿಸಿ ಶಿಕ್ಷೆ ಪ್ರಕಟಿಸಲಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...