alex Certify
ಕನ್ನಡ ದುನಿಯಾ       Mobile App
       

Kannada Duniya

ರಷ್ಯಾ ಮಹಿಳೆ ಮೇಲೆ ಮನಾಲಿಯಲ್ಲಿ ಗ್ಯಾಂಗ್ ರೇಪ್

33 ವರ್ಷದ ರಷ್ಯಾದ ಮಹಿಳೆ ಮೇಲೆ ಹಿಮಾಚಲ ಪ್ರದೇಶದ ಮನಾಲಿಯ ಕುಲುವಿನಲ್ಲಿ ಗ್ಯಾಂಗ್ ರೇಪ್ ನಡೆದಿರುವ ಆರೋಪ ದಾಖಲಾಗಿದೆ. ಈಗಾಗ್ಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಇಂತಾ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಜುಲೈನಲ್ಲಿ ಕೂಡ 15 ವರ್ಷ ಯುವತಿಯನ್ನ ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಿದಂತಾ ಘಟನೆ ನಡೆದಿತ್ತು. ಯುವತಿ ಶಾಲೆಯಿಂದ ಹಿಂದಿರುಗುವ ವೇಳೆ ಆಕೆಯನ್ನ ಬಲವಂತವಾಗಿ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಎರಡು ದಿನಗಳ ನಂತರ ಯುವತಿಯ ಮೃತದೇಹ ಸಿಕ್ಕಿತ್ತು. ಪ್ರಕರಣದ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಈ ಘಟನೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕ್ಯಾಂಡಲ್ ಮಾರ್ಚ್ ಕೂಡ ನಡೆಸಿತ್ತು. ಈ ಘಟನೆಯ ಹಿಂದೆ ಹೈಪ್ರೊಫೈಲ್ ಕುಟುಂಬದ ಸದಸ್ಯರಿದ್ದಾರೆ ಅಂತ ಯುವ ಮೋರ್ಚಾ ಆರೋಪಿಸಿತ್ತು. ಜೂನ್ ನಲ್ಲಿ ಕೂಡ 12ನೇ ತರಗತಿಯ ವಿದ್ಯಾರ್ಥಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...