alex Certify
ಕನ್ನಡ ದುನಿಯಾ       Mobile App
       

Kannada Duniya

ತಲಾಕ್ ನಂತ್ರವೂ ಮಾಜಿ ಪತ್ನಿ ಕೋಣೆಗೆ ಬರ್ತಿದ್ದ ಪತಿ

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮಾಜಿ ಪತಿ ವಿರುದ್ಧ ಅತ್ಯಾಚಾರ ಹಾಗೂ ಅಸ್ವಾಭಾವಿಕ ಸೆಕ್ಸ್ ಆರೋಪ ಹೊರಿಸಿದ್ದಾಳೆ. ಘಟನೆ ನಡೆದಿರುವುದು ಮೌಂಟ್ ಸಾಹಿಬ್ ಪ್ರದೇಶದಲ್ಲಿ.

ಮಹಿಳೆ 6 ತಿಂಗಳ ಗರ್ಭಿಣಿಯಂತೆ. ವಿಚ್ಛೇದನ ನೀಡಿರುವ ಪತಿ ಗರ್ಭಪಾತಕ್ಕೆ ಒತ್ತಾಯ ಮಾಡ್ತಿದ್ದಾನಂತೆ. ಒಂದು ವರ್ಷದ ಹಿಂದೆ ಇಬ್ಬರ ಮದುವೆ ಮುಸ್ಲಿಂ ಪದ್ಧತಿಯಂತೆ ನೆರವೇರಿತ್ತಂತೆ. ಆದ್ರೆ ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನ ನೀಡಿದ್ದ ಪತಿ, ಆಗಾಗ ಆಕೆ ಮನೆಗೆ ಬರ್ತಿದ್ದನಂತೆ.

ಮತ್ತೊಮ್ಮೆ ಮದುವೆಯಾಗುವುದಾಗಿ ನಂಬಿಸಿ ಆಕೆ ಜೊತೆ ಸಂಬಂಧ ಬೆಳೆಸಿದ್ದನಂತೆ. ಪತ್ನಿ ಗರ್ಭಿಣಿ ಎಂಬ ಸಂಗತಿ ತಿಳಿಯುತ್ತಿದ್ದಂತೆ ಮಾತು ಬದಲಿಸಿದ ಪತಿ ಗರ್ಭಪಾತಕ್ಕೆ ಮುಂದಾಗಿದ್ದನಂತೆ. ಆದ್ರೆ ಮಹಿಳೆ ಇದನ್ನು ನಿರಾಕರಿಸಿದ್ದಾಳೆ. ಅನೇಕ ಬಾರಿ ಅಸ್ವಾಭಾವಿಕವಾಗಿ ಸಂಬಂಧ ಬೆಳೆಸಿರುವ ಪತಿ ವಿರುದ್ಧ ಈಗ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...