alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗಿಸ್ತು ಗುಪ್ತ ಕ್ಯಾಮರಾದಲ್ಲಿ ಸೆರೆಯಾದ ಅಮ್ಮನ ರೂಂ ದೃಶ್ಯ

ma_b_150716

ಅತ್ತೆ ಸೊಸೆಗೆ, ಸೊಸೆ ಅತ್ತೆಗೆ, ವಯಸ್ಸಾದ ಅಮ್ಮನಿಗೆ ಮಗಳು ಚಿತ್ರ ಹಿಂಸೆ ನೀಡುವ ಅನೇಕ ಪ್ರಕರಣಗಳು ನಮ್ಮ ಮುಂದಿವೆ. ಆಗಾಗ ಇಂತ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಆದ್ರೆ ಹಿರಿಯ ಜೀವಗಳಿಗೆ ಸಾಂತ್ವಾನ ಹೇಳಿ, ಸರಿಯಾದ ಆರೈಕೆ ಮಾಡಬೇಕಾದ ಆಸ್ಪತ್ರೆಗಳು ಕೂಡ ಈಗ ಮಾನವೀಯತೆ ಮರೆತಿವೆ.

ಕ್ಯಾಮಿಲ್ಲೆ ಎಂಬ ವ್ಯಕ್ತಿ ಆಸ್ಪತ್ರೆ ಸಿಬ್ಬಂದಿಯ ಕ್ರೌರ್ಯ ನೋಡಿ ಕಂಗಾಲಾಗಿದ್ದಾರೆ. ಅವರು ತಮ್ಮ ತಾಯಿಯನ್ನು ನರ್ಸಿಂಗ್ ಹೋಮ್ ಗೆ ಸೇರಿಸಿದ್ದರು. ತಾಯಿಯ ಆರೋಗ್ಯ ವಿಚಾರಿಸಲು ಬಂದಾಗ ಆಕೆಯ ಮೈ ಮೇಲೆ ಗಾಯಗಳಾಗಿರುವುದನ್ನು ನೋಡಿದ್ದಾರೆ. ಈ ಬಗ್ಗೆ ಸಿಬ್ಬಂದಿಗೆ ಕೇಳಿದ್ದಾರೆ. ಆದ್ರೆ ಅವರು ಯಾವುದೇ ಉತ್ತರ ನೀಡಿಲ್ಲ. ಹಾಗಾಗಿ ಕ್ಯಾಮಿಲ್ಲೆ, ರೂಮ್ ನಲ್ಲಿ ಹಿಡನ್ ಕ್ಯಾಮರಾ ಅಳವಡಿಸಿದ್ದಾರೆ.

ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಕ್ಯಾಮಿಲ್ಲೆ ದಂಗಾಗುವಂತೆ ಮಾಡಿದೆ. ಸಿಬ್ಬಂದಿ ವರ್ತನೆ ಬಗ್ಗೆ ಆಸ್ಪತ್ರೆ ಸಿಇಒಗೆ ದೂರು ಸಲ್ಲಿಸಿದ್ದಾರೆ. ದೃಶ್ಯ ನೋಡಿದ ಸಿಇಒ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ವರ್ತನೆ ನಂಬಲಸಾಧ್ಯ ಎಂದಿರುವ ಅವರು ತಕ್ಷಣ ತನಿಖೆಗೆ ಆದೇಶ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...