alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ.ಸ್ಟಾಂಪ್ ಪೇಪರ್ ನಲ್ಲಿ ಮಾರಾಟವಾಗ್ತಾಳೆ ಮಹಿಳೆ

ಮಹಿಳೆ ಮೇಲೆ ನಡೆಯುತ್ತಿರುವ ಶೋಷಣೆ ಇನ್ನೂ ನಿಂತಿಲ್ಲ. ಮಹಿಳೆ ವಿದ್ಯಾವಂತೆಯಾಗ್ಲಿ, ಉದ್ಯೋಗದಲ್ಲಿರಲಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಸಮಾನ ಸ್ವಾತಂತ್ರ್ಯ, ಹಕ್ಕು ಸಿಕ್ಕಿಲ್ಲ. ಮಹಿಳೆ ಒಂದಲ್ಲ ಒಂದು ಕಾರಣಕ್ಕೆ ಶೋಷಣೆಗೊಳಗಾಗ್ತಿದ್ದಾಳೆ. ಮಧ್ಯಪ್ರದೇಶದ ಒಂದು ಗ್ರಾಮದಲ್ಲಿ ಮಹಿಳೆಯನ್ನು ಬಾಡಿಗೆಗೆ ನೀಡುವ ಪದ್ಧತಿ ಈಗಲೂ ಇದೆ.

ಸಾವಿರ ರೂಪಾಯಿಗೆಲ್ಲ ಮಹಿಳೆಯರನ್ನು ಶ್ರೀಮಂತ ಪುರುಷರು ಬಾಡಿಗೆ ಪಡೆಯುತ್ತಾರೆ. ತಿಂಗಳಿನಿಂದ ಹಿಡಿದು ವರ್ಷದವರೆಗೆ ಮಹಿಳೆಯರನ್ನು ಬಾಡಿಗೆ ರೂಪದಲ್ಲಿ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕೆಲ ಪ್ರದೇಶದ ಮಹಿಳೆಯರು ಈ ಶೋಷಣೆಗೊಳಗಾಗ್ತಿದ್ದಾರೆ.

ಇದೊಂದು ಪದ್ಧತಿ ರೂಪದಲ್ಲಿ ಬೆಳೆದು ಬಂದಿದೆ. ಮದುವೆಯಾಗದ ಶ್ರೀಮಂತ ಪುರುಷರು ಸಾವಿರ ರೂಪಾಯಿ ಖರ್ಚು ಮಾಡಿ ಮಹಿಳೆಯರನ್ನು ಬಾಡಿಗೆಗೆ ಪಡೆಯುತ್ತಾರೆ. ಈ ಮಹಿಳೆಯರನ್ನು ಅವ್ರು ಮದುವೆಯಾಗುವಂತಿಲ್ಲ. ತಿಂಗಳು, ವರ್ಷಕ್ಕೆಂದು ಕರಾರಿನ ಮೇಲೆ ಬಾಡಿಗೆಗೆ ಪಡೆಯಬೇಕು.

ಹತ್ತು ರೂಪಾಯಿ ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕಬೇಕಾಗುತ್ತದೆ. ಒಪ್ಪಂದ ಮುಗಿದ ಮೇಲೆ ಕಾಂಟ್ರಾಕ್ಟನ್ನು ಮುಂದುವರೆಸಬಹುದು ಇಲ್ಲವೆ ಮಹಿಳೆಯನ್ನು ಮನೆಗೆ ವಾಪಸ್ ಕಳುಹಿಸಬಹುದು. ಮಧ್ಯವರ್ತಿಗಳು ಇದ್ರಲ್ಲಿ ಹಣ ಮಾಡಿಕೊಳ್ತಾರೆ. ಶ್ರೀಮಂತರಿಂದ 75 ಸಾವಿರದವರೆಗೆ ಹಣ ಪಡೆಯುವ ಅವರು ಹುಡುಗಿ ಮನೆಯವರಿಗೆ 15-20 ಸಾವಿರ ನೀಡ್ತಾರೆ. ಮಧ್ಯಪ್ರದೇಶದಲ್ಲೊಂದೇ ಅಲ್ಲ ಗುಜರಾತಿನಲ್ಲೂ ಇಂಥ ಪ್ರಕರಣ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...