alex Certify
ಕನ್ನಡ ದುನಿಯಾ       Mobile App
       

Kannada Duniya

”ನವ ವಧುವಿನಂತೆ ಎಲ್ಲ ಹೇಳ್ಬೇಕಾ” ಐಎಎಸ್ ಅಧಿಕಾರಿ ವಿರುದ್ಧ ಕಿರುಕುಳ ಆರೋಪ

ಹರ್ಯಾಣ ಸರ್ಕಾರದಡಿ ಕೆಲಸ ಮಾಡುವ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದಾರೆ. ಭಾನುವಾರ ಫೇಸ್ಬುಕ್ ಮೂಲಕ ಮಹಿಳಾ ಅಧಿಕಾರಿ ತನ್ನ ನೋವನ್ನು ಬಹಿರಂಗಪಡಿಸಿದ್ದಾರೆ.

28 ವರ್ಷದ ಐಎಎಸ್ ಅಧಿಕಾರಿ ಫೇಸ್ಬುಕ್ ನಲ್ಲಿ ಹಿರಿಯ ಅಧಿಕಾರಿ ವರ್ತನೆಯ ಬಗ್ಗೆ ಹೇಳಿದ್ದಾರೆ. ನವ ವಧುವಿನಂತೆ ನಿನಗೆ ಎಲ್ಲವನ್ನೂ ಹೇಳಿ ಕೊಡಬೇಕಾ ಎಂದು ಪ್ರಶ್ನೆ ಮಾಡುವ ಅಧಿಕಾರಿ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಅವ್ರ ನಡವಳಿಕೆ ನನಗೆ ಅನೈತಿಕವೆನ್ನಿಸ್ತಿದೆ ಎಂದು ಮಹಿಳಾ ಅಧಿಕಾರಿ ದೂರಿದ್ದಾರೆ.

ರಾಷ್ಟ್ರಪತಿ ಕಾರ್ಯಾಲಯ ಹಾಗೂ ಕೇಂದ್ರ ಸರ್ಕಾರಕ್ಕೆ ಮಹಿಳೆ ಅಧಿಕಾರಿ 53 ಬಾರಿ ದೂರು ಸಲ್ಲಿಸಿದ್ದಾರಂತೆ. ಆದ್ರೆ ಈವರೆಗೂ ಯಾವುದೇ ಕ್ರಮಕೈಗೊಳ್ಳಲಿಲ್ಲವೆಂದು ಮಹಿಳೆ ಫೇಸ್ಬುಕ್ ನಲ್ಲಿ ಹೇಳಿದ್ದಾರೆ. ತಮ್ಮ ಛೇಂಬರ್ ಗೆ ಕರೆಯುತ್ತಿದ್ದ ಹಿರಿಯ ಅಧಿಕಾರಿಗಳು ಜಾರಿಯಾದ ಫೈಲ್ ಗಳ ವಿರುದ್ಧ ಪ್ರತಿಕ್ರಿಯೆ ನೀಡದಂತೆ ಆಗಾಗ ಸೂಚನೆ ನೀಡುತ್ತಿದ್ದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ಧಮಕಿ ಹಾಕ್ತಿದ್ದರು ಎಂದು ಮಹಿಳೆ ಫೇಸ್ಬುಕ್ ನಲ್ಲಿ ಹೇಳಿದ್ದಾರೆ.

ಆದ್ರೆ ಹಿರಿಯ ಅಧಿಕಾರಿ ತಮ್ಮ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮಹಿಳೆಗೆ ಕೆಲವೊಂದು ಸಲಹೆ ನೀಡಲಾಗಿದೆಯೇ ವಿನಃ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...