alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ಕಿಗೆ ಲೈಂಗಿಕ ಕಿರುಕುಳ: ಹಾಸ್ಯನಟನ ವಿರುದ್ಧ ದೂರು

ಬೆಂಗಳೂರು: ‘ಮಜಾ ಟಾಕೀಸ್’ ಸೇರಿದಂತೆ ಹಲವು ಕಾಮಿಡಿ ಶೋಗಳಲ್ಲಿ, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಹಾಸ್ಯನಟನ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಟೆಕ್ಕಿಯೊಬ್ಬರು ಇಂತಹ ಆರೋಪ ಮಾಡಿದ್ದು, ನಟ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರಿದ್ದಾರೆ. ಪೊಲೀಸರಿಗೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಅವರು ದೂರು ನೀಡಿದ್ದಾರೆ.

ಉತ್ತರಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಮಹಿಳಾ ಟೆಕ್ಕಿ ತನ್ನ ಮಗಳ ಜೊತೆ ವಾಸವಾಗಿದ್ದು, ಇದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಹಾಸ್ಯನಟ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಮಹಿಳೆ, ನಟ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...