alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಮುಗಿಸಿ ಬಂದಾಕೆ ಹೋಗಿದ್ದು ಪೊಲೀಸ್ ಠಾಣೆಗೆ..!

2016_6image

ಕೆಲ ದಿನಗಳ ಹಿಂದಷ್ಟೆ ಅವರು ಹನಿಮೂನ್ ಮುಗಿಸಿ ಬಂದಿದ್ದರು. ನವವಿವಾಹಿತೆ ಅದೇ ಗುಂಗಿನಲ್ಲಿ ಹೊಸ ಬಾಳಿನ ಕನಸು ಕಾಣ್ತಾ ಇದ್ದಳು. ಆದ್ರೆ ಗಂಡ ಕೊಟ್ಟ ಶಾಕ್ ಆಕೆಯ ಜೀವನದ ದಿಕ್ಕನ್ನು ಬದಲಾಯಿಸಿದೆ. ಮದುವೆಯಾಗಿ ಹನಿಮೂನ್ ಮುಗಿಸಿ ಬಂದ ಪತಿರಾಯ ಬೇರೊಬ್ಬಳ ಜೊತೆ ಓಡಿ ಹೋಗಿದ್ದಾನೆ.

ಜಬಲಪುರದ ನಿರ್ಮಿತ್ ಜೈನ್ ಮದುವೆ ಕೆಲ ದಿನಗಳ ಹಿಂದೆ ನಡೆದಿತ್ತು. ನವ ಜೋಡಿ ಮಾರಿಷಸ್ ಸುತ್ತಿ ಬಂದಿದ್ದರು. ಮನೆಗೆ ಬಂದ ಮೂರನೇ ದಿನ 24 ವರ್ಷದ ನಿರ್ಮಿತ್ ಜೈನ್ 45 ವರ್ಷದ ಶಿವದಾಸ್ತಾನಿ ಜೊತೆ ಓಡಿ ಹೋಗಿದ್ದಾನೆ. ಈ ವಿಷಯ ತಿಳಿದು ದಿಕ್ಕು ತೋಚದವಳಾಗಿದ್ದಾಳೆ ನವವಿವಾಹಿತೆ.

ನಿರ್ಮಿತ್ ಹಾಗೂ ಶಿವದಾಸ್ತಾನಿ ಸುಮಾರು ಮೂರು ವರ್ಷಗಳಿಂದ ಪ್ರೀತಿಸ್ತಾ ಇದ್ದರಂತೆ. ಈ ವಿಷಯ ಸುತ್ತಮುತ್ತಲಿನ ಜನರಿಗೆಲ್ಲ ತಿಳಿದಿತ್ತು. ನವವಿವಾಹಿತೆ ಸದ್ಯ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರಿಗಾಗಿ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...