alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ನಲ್ಲಿ ಮಾತಾಡೋದನ್ನು ವಿರೋಧಿಸಿದ್ದಕ್ಕೆ ಬಿತ್ತು ಒದೆ

ಮನೆ ಮುಂದೆ ಫೋನ್ ನಲ್ಲಿ ಮಾತನಾಡ್ತಿದ್ದ ಯುವಕನನ್ನು ತಡೆದಿದ್ದು ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಯುವಕ ತನ್ನ ಸ್ನೇಹಿತರ ಜೊತೆ ಬಂದು ವ್ಯಕ್ತಿ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ಎಲ್ಲ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಘಟನೆ ಗುರ್ಗಾಂವ್ ನ ಬಾದ್ಶಾಹ್ಪುರ್ ಸೋಹ್ನಾ ರಸ್ತೆಯಲ್ಲಿ ಫೆಬ್ರವರಿ 13ರಂದು ಸಂಜೆ ನಡೆದಿದೆ. 100ಕ್ಕೆ ಕರೆ ಮಾಡಿದ್ರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲ. ಘಟನೆ ನಡೆದ ಕೆಲ ಗಂಟೆ ನಂತ್ರ ಪೀಡಿತ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಒಬ್ಬ ವ್ಯಕ್ತಿ ತಲೆ ಮೇಲೆ 6ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ. ಹೆಲ್ಮೆಟ್ ಧರಿಸಿದ್ದ ಯುವಕನೊಬ್ಬ ಮನೆ ಮುಂದೆ ಫೋನ್ ನಲ್ಲಿ ಮಾತನಾಡಿದ್ದಾನೆ. ಸುಮಂತ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ. ಸುಮಂತ್ ಗೆ ಧಮಕಿ ಹಾಕಿದ ವ್ಯಕ್ತಿ ನನಗೆ ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಎಂದಿದ್ದಾನೆ. ಘಟನೆ ನಡೆದು 48 ಗಂಟೆಯಾದ್ರೂ ಯಾರನ್ನೂ ಪೊಲೀಸರು ಬಂಧಿಸಿಲ್ಲ. ರಾಜಕಾರಣಿಗಳ ಒತ್ತಡಕ್ಕೆ ಹೀಗೆ ಮಾಡ್ತಿದ್ದಾರೆಂದು ಪೀಡಿತ ಆರೋಪಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...