alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಸಂಭ್ರಮಾಚರಣೆ ತಂದಿಟ್ಟ ಸಂಕಷ್ಟ

arrest-235578ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಬ್ಬರು ವ್ಯಕ್ತಿಗಳು ಗುಂಡಿನ ಮತ್ತಿನಲ್ಲಿ ಮದುವೆಯ ಸಂಭ್ರಮಾಚರಣೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ತಮ್ಮ ರಿವಾಲ್ವರ್ ನಿಂದ ಇವರುಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ಸೆಪ್ಟೆಂಬರ್ 21 ರಂದು ಹೈದ್ರಾಬಾದ್ ನ ಕುಲ್ಸಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ಟರಿ ಫಂಕ್ಷನ್ ಹಾಲ್ ನಲ್ಲಿ ಸಲಾಹುದ್ದೀನ್ ಎಂಬಾತನ ಸಹೋದರ ಸಂಬಂಧಿಯ ವಿವಾಹ ನಡೆಯುತ್ತಿತ್ತು. ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಲಾಹುದ್ದೀನ್ ಹಾಗೂ ಮತ್ತಾತನ ಸಂಬಂಧಿ ಮಕ್ಸೂದ್ ಸಂಭ್ರಮಾಚರಣೆ ಮಾಡಲು ತಮ್ಮ .32 ರಿವಾಲ್ವರ್ ನಿಂದ ಆರು ಸುತ್ತು ಗುಂಡು ಹಾರಿಸಿದ್ದರು.

ಈ ವೇಳೆ ಇಬ್ಬರೂ ಪಾನಮತ್ತರಾಗಿದ್ದರೆಂದು ಹೇಳಲಾಗಿದ್ದು, ಗುಂಡು ಹಾರಿಸಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶುಕ್ರವಾರದಂದು ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರಿಬ್ಬರು ಹಾಥ್ ವೇ ಕೇಬಲ್ ಕಂಪನಿಯ ನೌಕರರೆಂದು ಹೇಳಲಾಗಿದ್ದು, ಮಕ್ಸೂದ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದಾನೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...