alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್ ಕೈ ಬೆರಳು ಕಟ್

guard-loses-fingers-for-failing-to-give-directionsಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್ ಒಬ್ಬನ ಕೈ ಬೆರಳುಗಳನ್ನು ಕತ್ತರಿಸಿರುವ ಘಟನೆ ನೋಯ್ಡಾದ ಸೆಕ್ಟರ್ 137 ರಲ್ಲಿ ನಡೆದಿದೆ.

ಕಟ್ಟಡವೊಂದರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅನಿಲ್ ಕುಮಾರ್ ಕೈ ಬೆರಳು ಕಳೆದುಕೊಂಡ ನತದೃಷ್ಟ. ಈತ ಕೆಲಸ ಮುಗಿಸಿಕೊಂಡು ಪಾಸರ್ ತೇರಾ ಸೊಸೈಟಿ ಬಳಿ ಇರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನಲ್ಲಿ ಆಗಮಿಸಿದ ಕೆಲವರು ಸೂರಜ್ಪುರಕ್ಕೆ ಹೋಗಲು ದಾರಿ ತೋರಿಸಲು ಕೇಳಿದ್ದಾರೆ.

ಆದರೆ ಈ ಕುರಿತು ಮಾಹಿತಿ ಇಲ್ಲದ ಅನಿಲ್ ಕುಮಾರ್ ತನಗೆ ಗೊತ್ತಿಲ್ಲವೆಂದು ಹೇಳಿದ್ದಾನೆ. ಅಷ್ಟಕ್ಕೆ ಕೋಪಗೊಂಡ ಕಾರು ಪ್ರಯಾಣಿಕರು ಅನಿಲ್ ಕುಮಾರ್ ನನ್ನು ಬಲವಂತವಾಗಿ ತಮ್ಮ ಕಾರಿಗೆ ಎತ್ತಾಕಿಕೊಂಡಿದ್ದಾರೆ. ಕಾರಿನಲ್ಲೇ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಸಮೀಪದ ಹೊಲಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದ ಬೆಳೆ ಕತ್ತರಿಸುವ ಯಂತ್ರಕ್ಕೆ ಆತನ ಕೈಬೆರಳಿಟ್ಟು ಮೂರು ಬೆರಳನ್ನು ಕತ್ತರಿಸಿದ್ದಾರೆ.

ನೋವಿನಿಂದ ಅನಿಲ್ ಕುಮಾರ್ ಕಿರುಚಾಡಿದ್ದು, ಇದನ್ನು ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಇದನ್ನು ಕಂಡು ಕಾರಿನಲ್ಲಿದ್ದವರು ಪರಾರಿಯಾಗಿದ್ದು, ಅನಿಲ್ ಕುಮಾರ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...