alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ 2 ದಿನ ಮೊದಲು ಮಾಡಿದ ಯಡವಟ್ಟು ಜೈಲು ಸೇರುವಂತೆ ಮಾಡ್ತು

ಮಧ್ಯಪ್ರದೇಶದ ಬಾಲಾಘಾಟ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದುವೆಯಾಗಲು ಹೊರಟಿದ್ದ ವರನನ್ನು ಮಧ್ಯದಲ್ಲಿಯೇ ತಡೆದ ಪೊಲೀಸರು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ. ವರನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ.

ಬಾಲಾಘಾಟ್ನ ಗ್ರಾಮವೊಂದರಲ್ಲಿ ಮದುವೆ ತಯಾರಿ ಜೋರಾಗಿ ನಡೆದಿತ್ತು. ದಿಬ್ಬಣ ಸಮೇತ ವರ ದಿನೇಶ್ ವಧು ಮನೆಗೆ ಬರ್ತಿದ್ದ. ಆದ್ರೆ ದಾರಿ ಮಧ್ಯೆಯೇ ದಿನೇಶ್ ನನ್ನು ಪೊಲೀಸರು ತಡೆದಿದ್ದಾರೆ. ಮದುವೆಗೆ 2 ದಿನ ಮೊದಲು ದಿನೇಶ್ ಅತ್ಯಾಚಾರವೆಸಗಿದ್ದಾನೆಂಬ ದೂರಿನ ಮೇಲೆ ಆತನನ್ನು ಬಂಧಿಸಿದ್ದಾರೆ.

ದಿನೇಶ್ ತನ್ನದೆ ಗ್ರಾಮದ ಯುವತಿ ಜೊತೆ 2 ವರ್ಷಗಳಿಂದ ಪ್ರೀತಿ ನಾಟಕವಾಡ್ತಿದ್ದ. ಮದುವೆ ಆಸೆ ತೋರಿಸಿ ಶಾರೀರಿಕ ಸಂಬಂಧ ಬೆಳೆಸಿದ್ದ. ಆಶ್ಚರ್ಯವೆಂದ್ರೆ ಮದುವೆಗೆ ಎರಡು ದಿನವಿರುವಾಗ್ಲೂ ದಿನೇಶ್ ಯುವತಿ ಜೊತೆ ಸಂಬಂಧ ಬೆಳೆಸಿದ್ದಾನೆ. ಆದ್ರೆ ಮದುವೆ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ.

ಮದುವೆ ದಿನ ಯುವತಿಗೆ ಸತ್ಯ ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾಳೆ. ಕ್ರಮಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...