alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮೊದಲು ಚಿಕ್ಕಮ್ಮನ ಜೊತೆ ಓಡಿ ಹೋದ ವರ

wedding1

ಉತ್ತರಪ್ರದೇಶದ ಮೈನ್ಪುರಿಯಲ್ಲಿ ಬಾರಾತ್ ಬರುವ ಮೊದಲೆ ವಧು ಚಿಕ್ಕಮ್ಮನ ಜೊತೆ ಪರಾರಿಯಾಗಿದ್ದಾನೆ. ಮೈನ್ಪುರದ ಒಂದು ವಿಧವೆ ಕಷ್ಟ ಪಟ್ಟು ತನ್ನ ಮಗಳನ್ನು ಬೆಳೆಸಿದ್ದಳು. ಬೆವರು ಹರಿಸಿ ಮಗಳ ಮದುವೆಗೆ ಹಣ ಕೂಡಿಟ್ಟಿದ್ದಳು. ನಂತರ ದೆಹಲಿಯ ಉತ್ತರ್ ನಗರದಲ್ಲಿ ನೆಲೆಸಿರುವ ಸತೀಶ್ ಎಂಬಾತನ ಜೊತೆ ಮದುವೆ ಫಿಕ್ಸ್ ಮಾಡಿದಳು.

ಮದುವೆಗೆ ಎಲ್ಲ ಸಿದ್ಧತೆ ಶುರುವಾಗಿತ್ತು. ಮನೆ ತುಂಬ ನೆಂಟರು ಬಂದಿದ್ದರು. ಆದ್ರೆ ಮದುವೆ ಹಿಂದಿನ ದಿನ ವರನ ಮನೆಯಿಂದ ಕರೆ ಬಂತು. ವರ ತನ್ನ ಚಿಕ್ಕಮ್ಮನ ಜೊತೆ ಓಡಿ ಹೋಗಿದ್ದಾನೆಂದು ಹೇಳಿದ್ರು. ಇದ್ರಿಂದ ಕಂಗಾಲಾದ ವಧುವಿನ ತಾಯಿ ತಲೆ ಸುತ್ತಿ ಬಿದ್ದಿದ್ದಳು. ಎರಡು ದಿನದ ನಂತರ ಮತ್ತೆ ವರನ ಕಡೆಯಿಂದ ಕರೆ ಬಂದಿದೆ.

ಮಗ ಮನೆಗೆ ವಾಪಸ್ ಬಂದಿದ್ದಾನೆ. ಈಗಲೂ ಮದುವೆ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಆದ್ರೆ ವಧು ಕಡೆಯವರು ಇದನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಂತರ ಹುಡುಗಿ ತಾಯಿ, ಸತೀಶ್ ಹಾಗೂ ಆತನ ಮನೆಯವರ ವಿರುದ್ಧ ಸುಳ್ಳು ಹಾಗೂ ವಂಚನೆ ದೂರು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...