alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಫ್ಟ್ ಪಡೆದದ್ದೇ ತಪ್ಪಾಯ್ತು: ಕಾರಿನಲ್ಲೇ ಈ ಕೆಲಸ ಮಾಡಿದ್ರು ಪಾಪಿಗಳು

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಿನ ದಿನಕ್ಕೂ ತಲೆ ತಗ್ಗಿಸುವ ಕೆಲಸ ನಡೆಯುತ್ತಿದೆ. ಇತ್ತ ಹೊಸ ಸರ್ಕಾರ ಬಂದ್ರೂ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬಂದಿಲ್ಲ. ಇದಕ್ಕೆ ಈ ಗ್ಯಾಂಗ್ ರೇಪ್ ಉತ್ತಮ ನಿದರ್ಶನ.

ಬುಧವಾರ ಸಂಜೆ 29 ವರ್ಷದ ಯುವತಿಯೊಬ್ಬಳು ದೆಹಲಿಯ ಗ್ರೀನ್ ಪಾರ್ಕ್ ಬಳಿ ಬಸ್ ಗಾಗಿ ಕಾಯುತ್ತ ನಿಂತಿದ್ದಳು. ಅಲ್ಲಿಗೆ ಬಂದ ಕಾರೊಂದು ಲಿಫ್ಟ್ ನೀಡುವುದಾಗಿ ಹೇಳಿದೆ. ಯುವತಿ ಲಿಫ್ಟ್ ಪಡೆಯಲು ನಿರ್ಧರಿಸಿದ್ದು ಕಾರು ಹತ್ತಿದ್ದಾಳೆ. ಸ್ವಲ್ಪ ದೂರದಲ್ಲಿ ತನ್ನ ಸ್ನೇಹಿತನನ್ನು ಕಾರಿಗೆ ಹತ್ತಿಸಿಕೊಂಡ ಚಾಲಕ ರಾಕ್ಷಸ ರೂಪ ತೋರಿಸಿದ್ದಾನೆ.

ಚಾಕು ತೋರಿಸಿ ಯುವತಿಯನ್ನು ಕಟ್ಟಿ ಹಾಕಿದ ಚಾಲಕ ಗ್ರೇಟರ್ ನೋಯ್ಡಾಗೆ ಕಾರು ಓಡಿಸಿದ್ದಾನೆ. ಕಾರಿನಲ್ಲಿಯೇ ಚಾಲಕ ಹಾಗೂ ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತ್ರ ಗುರುವಾರ ಬೆಳಿಗ್ಗೆ ಯುವತಿಯನ್ನು ಗ್ರೇಟರ್ ನೋಯ್ಡಾದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ. ಯುವತಿ ಮೈ ಮೇಲಿದ್ದ ಒಡವೆ ಹಾಗೂ ಹಣವನ್ನೂ ಲೂಟಿ ಮಾಡಿದ್ದಾರೆ.

ಸ್ಥಳೀಯರ ನೆರವು ಪಡೆದು ಕುಟುಂಬಸ್ಥರಿಗೆ ಕರೆ ಮಾಡಿದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುತ್ತಮುತ್ತಲಿರುವ ಸಿಸಿ ಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ಶುರುಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...