alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿಯೇ ಮಾಡಿದ್ಲು ಮಾಜಿ ಬಾಕ್ಸರ್ ಹತ್ಯೆ: ಬೆಳಕಿಗೆ ಬಂತು ಭಯಾನಕ ಸತ್ಯ

ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ನಗರದಲ್ಲಿ ನಡೆದ ಮಾಜಿ ಅಂತರಾಷ್ಟ್ರೀಯ ಬಾಕ್ಸರ್ ಜಿತೇಂದ್ರ ಮಾನ್ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಗೆ ಟ್ರೈಯಾಂಗಲ್ ಪ್ರೀತಿಯೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಜಿತೇಂದ್ರ ಮಾನ್ ಪ್ರೇಯಸಿಯೇ ಮಾಜಿ ಬಾಕ್ಸರ್ ಹತ್ಯೆ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿ ಸಮೇತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 12ರಂದು ಗ್ರೇಟರ್ ನೋಯ್ಡಾದ ಅಪಾರ್ಟ್ಮೆಂಟ್ ಒಂದರಲ್ಲಿ ಗುಂಡೇಟು ತಿಂದು ಜಿತೇಂದ್ರ ಸಾವನ್ನಪ್ಪಿದ್ದರು. ಅವರ ಮೃತದೇಹ ವಶಕ್ಕೆ ಪಡೆದ ಪೊಲೀಸರು ತನಿಖೆ ಶುರುಮಾಡಿದ್ದರು. ಒಂದು ವಾರದ ಬಳಿಕ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ಹುಡುಗಿ ಸತ್ಯ ಬಾಯ್ಬಿಟ್ಟಿದ್ದಾಳೆ.

ಮಾನ್, ಜಿಮ್ ಒಂದರಲ್ಲಿ ತರಬೇತುದಾರನಾಗಿ ಕೆಲಸ ಮಾಡ್ತಿದ್ದ. ಅಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿದೆ. ಇಬ್ಬರೂ ದಿನಕಳೆದಂತೆ ಹತ್ತಿರವಾಗಿದ್ದಾರೆ. ಈ ಮಧ್ಯೆ ಮಾನ್ ಹುಡುಗಿಯ ಅಶ್ಲೀಲ ಎಂಎಂಎಸ್ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಲು ಶುರುಮಾಡಿದ್ದಾನೆ.

ಆಗ ಹುಡುಗಿ ತನ್ನ ಹಳೆ ಪ್ರೇಮಿ ಬಳಿ ಹೋಗಿದ್ದಾಳೆ. ಮಾನ್ ಪರಿಚಯಕ್ಕೂ ಮುನ್ನ ಇಮ್ರಾನ್ ಎಂಬಾತನನ್ನು ಪ್ರೀತಿ ಮಾಡ್ತಿದ್ದ ಹುಡುಗಿ ಆತನನ್ನು ಮದುವೆ ಕೂಡ ಆಗಿದ್ದಳಂತೆ. ಮತ್ತೆ ಇಮ್ರಾನ್ ಬಳಿ ಹೋದ ಹುಡುಗಿ ಮಾನ್ ಬಗ್ಗೆ ದೂರು ಹೇಳಿದ್ದಾಳೆ. ಆತನನ್ನು ತನ್ನ ದಾರಿಯಿಂದ ಕಿತ್ತೆಸೆಯಲು ಪ್ಲಾನ್ ಮಾಡಿದ್ದಾಳೆ. ಅಪಾರ್ಟ್ಮೆಂಟ್ ಗೆ ಬಂದು ಒಂದೊಂದಾಗಿ ನಾಲ್ಕು ಗುಂಡು ಹಾರಿಸಿ ಮಾನ್ ಪ್ರಾಣ ತೆಗೆದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...