alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರವೆಸಗಲು ಬಂದವರು ಪತಿ ಮೂಗು ಕತ್ತರಿಸಿದ್ರು

ರಾಜಸ್ಥಾನದ ಧೌಲ್ಪುರ್ ನಲ್ಲಿ ಮಹಿಳೆ ಅತ್ಯಾಚಾರಕ್ಕೆ ಯತ್ನಿಸಿದ ದುಷ್ಟನ ವಿರುದ್ಧ ದಂಪತಿ ಹೋರಾಡಿದ ಘಟನೆ ನಡೆದಿದೆ. ದುಷ್ಟನಿಂದ ಮಹಿಳೆ ಬಚಾವ್ ಆಗಿದ್ದಾಳೆ. ಆದ್ರೆ ಆಕೆ ಪತಿಗೆ ಗಂಭೀರ ಗಾಯಗಳಾಗಿವೆ. ದುಷ್ಟ, ಮಹಿಳೆ ಪತಿ ಮೂಗನ್ನೇ ಕತ್ತರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅಶೋಕ್ ಎಂಬಾತ ಪೀಡಿತರ ಮನೆಗೆ ನುಗ್ಗಿದ್ದಾನೆ. ಮಲಗಿದ್ದ ಮಹಿಳೆ ಎಬ್ಬಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಭಯದಿಂದ ಕೂಗಿಕೊಂಡ ಮಹಿಳೆ ಆತನಿಗೆ ಹೊಡೆದಿದ್ದಾಳೆ. ಇದ್ರಿಂದ ಎಚ್ಚರಗೊಂಡ ಪತಿ ಕೂಡ ಅಶೋಕ್ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ ಅಶೋಕ್ , ಮಹಿಳೆ ಪತಿ ಮೂಗು ಕತ್ತರಿಸಿದ್ದಾನೆ.

ಪತಿ ಪರಿಸ್ಥಿತಿ ನೋಡಿ ಕಂಗಾಲಾದ ಮಹಿಳೆ ಉಪಚಾರಕ್ಕಿಳಿದ್ರೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ನಂತ್ರ ತನ್ನ ತಾಯಿ ಸೇರಿದಂತೆ ನಾಲ್ಕೈದು ಜನರ ಜೊತೆ ಬಂದು ಧಮಕಿ ಹಾಕಿದ್ದಾನೆ. ಹೀಗೋ ಅಲ್ಲಿಂದ ತಪ್ಪಿಸಿಕೊಂಡು ಬಂದ ಪೀಡಿತರಿಗೆ ದಾರಿಯಲ್ಲಿ ಸಿಕ್ಕು ಮತ್ತೆ ಹೆದರಿಸಿದ್ದಾರೆ ಖದೀಮರು.

ಹೇಗೋ ಮಧ್ಯರಾತ್ರಿ ಕಾಡಿನಲ್ಲಿ ಬಂದು ಲಾರಿ ನೆರವಿನಿಂದ 16 ಕಿಲೋಮೀಟರ್ ಸಂಚರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ ದಂಪತಿ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಗೆ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಜೊತೆಗೆ ಇಬ್ಬರನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...