alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ಟಚ್, ಬ್ಯಾಡ್ ಟಚ್ ಶಿಕ್ಷಕನಿಂದಲೇ ಬಾಲಕರಿಗೆ ಲೈಂಗಿಕ ಕಿರುಕುಳ

ಪುಣೆಯ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಮೂಡಿಸುತ್ತಿದ್ದ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾನೆ.

ಹದಾಪ್ಸರನಲ್ಲಿನ ಶಾಲೆಯ 40 ವರ್ಷದ ಕ್ರೀಡಾ ಶಿಕ್ಷಕ ಕಳೆದ 5 ತಿಂಗಳ ಅವಧಿಯಲ್ಲಿ 9ನೇ ತರಗತಿಯ ನಾಲ್ವರು ಬಾಲಕರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ 7 ವರ್ಷಗಳಿಂದ ಈ ಶಿಕ್ಷಕ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಈತ ಶಾಲೆಯಲ್ಲಿ ನಡೆದ ಗುಡ್ ಟಚ್, ಬ್ಯಾಡ್ ಟಚ್ ಅರಿವು ಕಾರ್ಯಕ್ರಮದ ಭಾಗವಾಗಿದ್ದ. ಈತನ ವಿರುದ್ಧ ಲೈಂಗಿಕ ದೌರ್ಜನ್ಯದ ಕುರಿತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹದಾಪ್ಸರ್ ಠಾಣೆಯ ಪೊಲೀಸರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪುಣೆಯಲ್ಲಿ ಬಂಧನಕ್ಕೊಳಗಾದ ಮೂರನೇ ಶಿಕ್ಷಕ ಈತ. ಸೆಪ್ಟೆಂಬರ್‌ನಲ್ಲಿ ಪುಣೆಯ ಫಾತಿಮಾನಗರದ ಶಾಲೆಯ ಪ್ರಾಂಶುಪಾಲನನ್ನು ಲೈಂಗಿಕ ದೌರ್ಜನ್ಯದ ಸಂಬಂಧ ಬಂಧಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಇಬ್ಬರು ಬಾಲಕಿಯರನ್ನು ಅತ್ಯಾಚಾರಗೈದ ಶಿಕ್ಷಕನೊಬ್ಬನನ್ನು ಬಂಧಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...