alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮವಾಗಿ ಸಾಗಿಸುತ್ತಿದ್ದ 140 ಚಿನ್ನದ ಬಿಸ್ಕತ್ ವಶ

gold-bisd

ಇಂಫಾಲ್: ಅಸ್ಸಾಂ ರೈಫಲ್ಸ್ ಯೋಧರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಂದಾಜು 6 ಕೋಟಿ ರೂ. ಮೌಲ್ಯದ 140 ಚಿನ್ನದ ಬಿಸ್ಕತ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಟ್ರಕ್ ಚಾಲಕ ಮೊಹಮ್ಮದ್ ಕಮಾಲ್ ಹಸನ್ ಎಂಬಾತನನ್ನು ಬಂಧಿಸಲಾಗಿದೆ. ಭಾರತ –ಮಯನ್ಮಾರ್ ಗಡಿಯಲ್ಲಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಟ್ರಕ್ ಪರಿಶೀಲಿಸಿದಾಗ 23 ಕೆ.ಜಿ. ಚಿನ್ನದ ಬಿಸ್ಕತ್ ಕಂಡು ಬಂದಿವೆ.

ತೆಂಗ್ ನೋಪಲ್ ಜಿಲ್ಲೆಯ ಮೋರೆಯಿಂದ ಇಂಫಾಲ್ ಕಡೆಗೆ ಟ್ರಕ್ ಬರುತ್ತಿತ್ತು. ಯೋಧರು ಅನುಮಾನದ ಮೇಲೆ ವಾಹನವನ್ನು ಪರಿಶೀಲಿಸಿದಾಗ ಚಿನ್ನದ ಬಿಸ್ಕತ್ ಕಂಡು ಬಂದಿವೆ.

ಬಂಧಿತನನ್ನು ವಿಚಾರಣೆ ಬಳಿಕ ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಚಿನ್ನವನ್ನು ಜಫ್ತಿ ಮಾಡಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...