alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿ ಸೋಗಿನಲ್ಲಿ ಬಂದು ಸರ ನುಂಗಿದ ಕಳ್ಳ !

chainರೋಗಿಯ ಸೋಗಿನಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಕಳ್ಳನೊಬ್ಬ, ಮಹಿಳೆ ಸರ ಕಸಿದು ಪರಾರಿಯಾಗುವ ಯತ್ನದಲ್ಲಿ ಸರವನ್ನೇ ನುಂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಆಲದೂರು ಗ್ರಾಮದ ಅಭಿಷೇಕ್ ಈ ಕೃತ್ಯ ಎಸಗಿದವ.

ಅಭಿಷೇಕ್ ಚಿಕಿತ್ಸೆ ಪಡೆದುಕೊಳ್ಳುವ ನೆಪದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದಾನೆ. ಸದಾ ಜನಜಂಗುಳಿಯಿರುವ ಆಸ್ಪತ್ರೆಯಲ್ಲಿ ಕೆಲ ಸಮಯ ಹೊಂಚು ಹಾಕಿದ ಆತ, ಮಾಹಿತಿ ಕೇಳಲು ಬಂದ ಮಹಿಳಾ ರೋಗಿಯೊಬ್ಬರ ಸರ ಎಳೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಮಹಿಳೆ ಕೂಗಿದ್ದರಿಂದ ಅಲ್ಲಿದ್ದವರೆಲ್ಲಾ ಅಭಿಷೇಕ್ ನನ್ನು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೈಯಲ್ಲಿದ್ದ ಸರ ನುಂಗಿದ ಆತ ತನ್ನನ್ನು ಹಿಡಿಯಲು ಬಂದವರ ಮೇಲೆಯೇ ಹಲ್ಲೆ ಮಾಡಿದ್ದಾನೆ.

ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿದ್ದ ರೋಗಿಗಳು ಅಭಿಷೇಕ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಭಿಷೇಕ್ ಗೆ ಚಿಕಿತ್ಸೆ ನೀಡಿದ ನಂತರ ಸರ ಹೊರಗೆ ಬಂದಿದ್ದು, ಸರದ ಪೆಂಡೆಂಟ್ ಹೊಟ್ಟೆಯಲ್ಲೇ ಸೇರಿಕೊಂಡಿರಬಹುದೆಂದು ಹೇಳಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...