alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯನ್ನು ರಕ್ಷಿಸಲು ಹೋಗಿ ಸಜೀವ ದಹನವಾದ್ರು ಮೂವರು ಮಕ್ಕಳು

ಮಧ್ಯಪ್ರದೇಶದ ಮೌಸಿಪುರ ಎಂಬಲ್ಲಿ ಅಮ್ಮನನ್ನು ರಕ್ಷಿಸಲು ಹೋಗಿ ಮೂವರು ಮಕ್ಕಳು ಸಜೀವ ದಹನವಾಗಿದ್ದಾರೆ. 2 ವರ್ಷದ ತುಳ್ಸಾ, 5 ವರ್ಷದ ಮುಸ್ಕಾನ್ ಹಾಗೂ 7 ವರ್ಷದ ಮಾನ್ಸಿ ಬೆಂಕಿಗೆ ಆಹುತಿಯಾಗಿದ್ದಾರೆ.

30 ವರ್ಷದ ಮಹಿಳೆ ರಾಣಿ ಲೋಧಿ ಎಂಬಾಕೆಗೆ ತೀವ್ರ ಹೊಟ್ಟೆನೋವು ಕಾಡುತ್ತಿತ್ತು. ಹೊಟ್ಟೆ ನೋವು ತಾಳಲಾರದೆ ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ಲು. ಈ ವೇಳೆ ಮೂವರು ಮಕ್ಕಳು ತಾಯಿಯನ್ನು ರಕ್ಷಿಸಲು ಧಾವಿಸಿದ್ದಾರೆ. ಮಕ್ಕಳಿಗೂ ಬೆಂಕಿ ತಗುಲಿದೆ. ಮೂವರೂ ಅಲ್ಲೇ ಸುಟ್ಟು ಕರಕಲಾಗಿದ್ದಾರೆ. ತಾಯಿ ರಾಣಿಗೂ ಕೂಡ ಶೇ.70ರಷ್ಟು ಸುಟ್ಟ ಗಾಯಗಳಾಗಿವೆ.

ಕಣ್ಣೆದುರೇ ಮಕ್ಕಳು ಸಜೀವ ದಹನಗೊಂಡಿರೋದನ್ನು ನೋಡಿರೋ ತಾಯಿ ಕೂಡ ಜೀವನ್ಮರಣ ಹೋರಾಟ ನಡೆಸಿದ್ದಾಳೆ. ರಾಣಿ ಆತ್ಮಹತ್ಯೆಗೆ ಯತ್ನಿಸಲು ಕೌಟುಂಬಿಕ ಕಲಹವೇ ಕಾರಣವಿರಬಹುದು ಅಂತಾ ಪೊಲೀಸರು ಶಂಕಿಸಿದ್ದಾರೆ. ಮೂವರು ಮಕ್ಕಳ ದುರಂತ ಸಾವಿನ ಪ್ರಕರಣದಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...