alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಪದ ಕೂಪದಿಂದ ಅಪ್ರಾಪ್ತೆಯರನ್ನು ರಕ್ಷಿಸಿದ ಪೊಲೀಸರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿರುವ ಹೈದರಾಬಾದ್ ಪೊಲೀಸರು 12 ಮಂದಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದು, ಪ್ರಕರಣಕ್ಕೆ  ಸಂಬಂಧಪಟ್ಟಂತೆ ಆರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು  ಬಂಧಿಸಲಾಗಿದೆ.

ಶಾಕಿಂಗ್ ಸಂಗತಿಯೆಂದರೆ ಅಪ್ರಾಪ್ತ ಬಾಲಕಿಯರಿಗೆ ಹಾರ್ಮೋನ್ಸ್‌ ಇಂಜೆಕ್ಷನ್‌ ನೀಡಿ ಅವರನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಸಂಗತಿ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಮಾನವ ಕಳ್ಳಸಾಗಣೆದಾರರು, ಬಡ ಕುಟುಂಬಗಳಿಂದ ಮಕ್ಕಳನ್ನು ಏಜೆಂಟ್‌ ಗಳ ಮೂಲಕ ಹಣ ಕೊಟ್ಟು ಖರೀದಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕಿಯರು ವಯಸ್ಕರಂತೆ ಕಾಣಲು ಅವರುಗಳಿಗೆ ಹಾರ್ಮೋನ್​ ಇಂಜೆಕ್ಷನ್‌ ಅನ್ನು ನೀಡಲಾಗುತ್ತಿತ್ತಲ್ಲದೇ ಹಣದಾಸೆಗೆ ಕೆಲ ವೈದ್ಯರೂ ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...