alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕೊಲೆ ಮಾಡು ಎನ್ನುತ್ತಿದ್ಲು ಪ್ರೇಯಸಿ…ಹಾಗಾಗಿ ಹೀಗೆ ಮಾಡ್ದ..!

download

ಮೀರತ್ ನಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗೆ ಮೊದಲೇ ಮದುವೆಯಾಗಿತ್ತು. ಒಂದು ಕಡೆ ಪತ್ನಿ ಇನ್ನೊಂದು ಕಡೆ ಪ್ರೇಯಸಿ. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿ ಪ್ರೇಯಸಿಯನ್ನು ಹತ್ಯೆಗೈದಿದ್ದಾನೆ.

ಕೆಲ ವರ್ಷಗಳಿಂದ ಪವನ್ ಕುಮಾರ್, ಡೊಲಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದ್ರೆ ಆಕೆ ಮದುವೆಯಾಗಲು ಒಪ್ಪಿರಲಿಲ್ಲ. ಹಾಗಾಗಿ ಪವನ್ ಇನ್ನೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಮದುವೆಯಾದ ಮೇಲೂ ಡೊಲಿ ಭೇಟಿಯಾಗ್ತಿದ್ದ. ಪದೇ ಪದೇ ಪತ್ನಿಯನ್ನು ಹತ್ಯೆ ಮಾಡಿ ತನ್ನನ್ನು ಮದುವೆಯಾಗುವಂತೆ ಡೊಲಿ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ.

ಜುಲೈ 22ರಂದು ಡೊಲಿ ಕರೆ ಮಾಡಿದ್ದಾಳೆ. ಪವನ್ ಕುಮಾರ್ ಗೆ ಭೇಟಿಯಾಗುವಂತೆ ಹೇಳಿದ್ದಾಳೆ. ಈ ವೇಳೆ ಸ್ವಲ್ಪ ತಲೆಬಿಸಿಯಲ್ಲಿದ್ದ ಪವನ್ ವಿಷ್ಯವನ್ನು ಪತ್ನಿಗೆ ಹೇಳಿದ್ದಾನೆ. ಹಾಗೆ ಜುಲೈ 23ರಂದು ಡೊಲಿ ಭೇಟಿ ಮಾಡಿದ್ದಾನೆ. ಇಬ್ಬರು ಶಾರೀರಿಕ ಸಂಬಂಧ ಕೂಡ ಬೆಳೆಸಿದ್ದಾರೆ. ಈ ವೇಳೆಯೂ ಡೊಲಿ ಪತ್ನಿ ಹತ್ಯೆ ಮಾಡು ಎಂದಿದ್ದಾಳಂತೆ. ಕೋಪಗೊಂಡ ಪವನ್, ಡೊಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸಂಶಯ ಬರದಿರಲಿ ಎನ್ನುವ ಕಾರಣಕ್ಕೆ ಡೊಲಿ ಫೋನ್ ನಿಂದ ಆಕೆಯ ಇನ್ನೊಂದು ಪ್ರೇಮಿಗೆ ಕರೆ ಮಾಡಿದ್ದಾನೆ. ಆದ್ರೆ ಪ್ರಕರಣ ಬೇಧಿಸಿದ ಪೊಲೀಸರು ಪವನ್ ನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...