alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಕೊಲೆ ಮಾಡಿ ಶಿಕ್ಷಕಿ ಜೊತೆ ಪತಿಯಾಗಿ ಜೀವನ ಸಾಗಿಸ್ತಿದ್ಲು ಯುವತಿ…!

ಘಾಜಿಯಾಬಾದ್ ನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ತಾಯಿಯನ್ನು ಕೊಲೆ ಮಾಡಿ ಶಿಕ್ಷಕಿ ಜೊತೆ ಆಕೆ ಪತಿಯಾಗಿ ಜೀವನ ಸಾಗಿಸ್ತಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. 20 ದಿನಗಳ ನಂತ್ರ ಹುಡುಗಿ ಹಾಗೂ ಶಿಕ್ಷಕಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮಾರ್ಚ್ 9ರಂದು ಶಿಕ್ಷಕಿ ಹುಡುಗಿ ಮನೆಗೆ ಬಂದಿದ್ದಳು. ಮಗಳು ಹಾಗೂ ಶಿಕ್ಷಕಿ ನಡುವಿನ ಸಂಬಂಧ ತಾಯಿಗೆ ಇಷ್ಟವಿರಲಿಲ್ಲ. ಇಬ್ಬರಿಗೂ ಬೈದಿದ್ದಾಳೆ. ಇದ್ರಿಂದ ಕೋಪಗೊಂಡ ಹುಡುಗಿ ತಾಯಿ ಕುತ್ತಿಗೆ ಮೇಲೆ ಭಾರವಾದ ವಸ್ತುವಿಟ್ಟು ಕೊಲೆಗೆ ಯತ್ನಿಸಿದ್ದಾಳೆ. ಘಟನೆ ನಡೆದ ತಕ್ಷಣ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಮಾರ್ಚ್ 11ರಂದು ತಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಮಗಳು ಹಾಗೂ ಶಿಕ್ಷಕಿ ವಿರುದ್ಧ ತಂದೆ ದೂರು ನೀಡಿದ್ದ ಎನ್ನಲಾಗಿದೆ. ತಲೆ ಮರೆಸಿಕೊಂಡು ಲುಧಿಯಾನಕ್ಕೆ ಹೋಗಿದ್ದ ಶಿಕ್ಷಕಿ ಹಾಗೂ ಹುಡುಗಿ ವೇಷ ಬದಲಿಸಿಕೊಂಡಿದ್ದರು. ಹುಡುಗ್ರಂತೆ ವೇಷ ಬದಲಿಸಿದ್ದ ಹುಡುಗಿ ಶಿಕ್ಷಕಿ ಪತಿ ಎಂದು ಎಲ್ಲರಿಗೂ ಹೇಳಿದ್ದಳು. ತೆಗೆದುಕೊಂಡು ಹೋದ ಹಣ ಖಾಲಿಯಾಗ್ತಿದ್ದಂತೆ ಶಿಕ್ಷಕಿ ಜೊತೆ ಹುಡುಗಿ ಘಾಜಿಯಾಬಾದ್ ಗೆ ಬಂದಿದ್ದಾಳೆ. ಆಗ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಕಳೆದ 2 ವರ್ಷಗಳಿಂದ ಶಿಕ್ಷಕಿ ಹಾಗೂ ಹುಡುಗಿ ನಡುವೆ ಸಂಬಂಧವಿತ್ತು ಎನ್ನಲಾಗಿದೆ. ಹಿಂದೊಮ್ಮೆ ಇಬ್ಬರೂ ಓಡಿ ಹೋಗಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...